alex Certify BIG NEWS: ಭಾರತದಲ್ಲಿ ಬಿಡಿ ಭಾಗಗಳ ತಯಾರಿಕೆಗೆ ಮುಂದಾದ BMW | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತದಲ್ಲಿ ಬಿಡಿ ಭಾಗಗಳ ತಯಾರಿಕೆಗೆ ಮುಂದಾದ BMW

ಐಷಾರಾಮಿ ಕಾರುಗಳ ತಯಾರಿಕೆಗೆ ಖ್ಯಾತವಾದ ಜರ್ಮನಿ ಮೂಲದ ಬಿಎಂಡಬ್ಲ್ಯೂ ಕಂಪನಿ ಭಾರತದ ಪಂಜಾಬ್ ನಲ್ಲಿ ಬಿಡಿ ಭಾಗಗಳ ತಯಾರಿಕಾ ಘಟಕ ಆರಂಭಿಸಲು ಸಮ್ಮತಿಸಿದೆ. ಈ ಮೂಲಕ ಚೆನ್ನೈ ನಂತರ ಬಿಎಂಡಬ್ಲ್ಯೂನ ಮತ್ತೊಂದು ಘಟಕ ಭಾರತದಲ್ಲಿ ಆರಂಭವಾಗಲಿದೆ ಎಂದು ಹೇಳಲಾಗಿದೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಜರ್ಮನಿಯಲ್ಲಿರುವ ಬಿಎಂಡಬ್ಲ್ಯೂ ಪ್ರಧಾನ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ. ಪಂಜಾಬ್ ಮುಖ್ಯಮಂತ್ರಿ ಕಚೇರಿಯಿಂದ ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿದೆ.

ಇತ್ತೀಚೆಗಷ್ಟೇ ಬಿಎಂಡಬ್ಲ್ಯೂ ಕಂಪನಿ ಭಾರತೀಯ ಮಾರುಕಟ್ಟೆಗೆ X4 ’50 jahre M edition ಕಾರನ್ನು ಬಿಡುಗಡೆ ಮಾಡಿದ್ದು ಇದರ ಎಕ್ಸ್ ಶೋರೂಮ್ ಬೆಲೆ 72,90,000 ರೂಪಾಯಿಗಳಾಗಿದೆ. ಹಾಗೆಯೇ 30i ಶ್ರೇಣಿಯ ಬೆಲೆಯನ್ನು 74,90,000 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.

ಭಾರತದಲ್ಲಿ ಬಿಎಂಡಬ್ಲ್ಯೂ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂಪನಿ ಈ ಒಂದು ತೀರ್ಮಾನವನ್ನು ಕೈಗೊಂಡಿದ್ದು, ಇದರಿಂದಾಗಿ ಭಾರತೀಯರಿಗೆ ಉದ್ಯೋಗಾವಕಾಶಗಳು ಹೆಚ್ಚಳವಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...