ಬಿಎಂಡಬ್ಲ್ಯು ಇಂಡಿಯಾ, ಕೊನೆಗೂ ದೇಶದ ಎಲೆಕ್ಟ್ರಿಕ್ ಮಾರುಕಟ್ಟೆ ಪ್ರವೇಶಿಸಿದೆ. ಕಂಪನಿಯು ಭಾರತದಲ್ಲಿ ಐಎಕ್ಸ್ ಎಲೆಕ್ಟ್ರಿಕ್ ಎಸ್ಯುವಿಯನ್ನು ಬಿಡುಗಡೆ ಮಾಡಿದೆ. ಬಿಎಂಡಬ್ಲ್ಯು ಐಎಕ್ಸ್ ನ ಎಕ್ಸ್ ಶೋ ರೂಂ ಬೆಲೆ 1.16 ಕೋಟಿ ರೂಪಾಯಿ.
ಈ ಐಷಾರಾಮಿ ಎಲೆಕ್ಟ್ರಿಕ್ ಕಾರು, ಮಾರುಕಟ್ಟೆಯಲ್ಲಿರುವ ಮರ್ಸಿಡಿಸ್ ಬೆಂಜ್, ಆಡಿ ಮತ್ತು ಜಾಗ್ವಾರ್ ನಂತಹ ಕಾರುಗಳಿಗೆ ಪೈಪೋಟಿ ನೀಡಲಿದೆ. ಈ ಕಂಪನಿಗಳು ಭಾರತದಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಮಾರಾಟ ಮಾಡುತ್ತವೆ.
ಬಿಎಂಡಬ್ಲ್ಯು ಹೊಸ ಎಲೆಕ್ಟ್ರಿಕ್ ಎಸ್ಯುವಿ ಐಎಕ್ಸನ್ನು ಕೇವಲ 1 ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದೆ. ಕಂಪನಿ ಇದಕ್ಕೆ xDrive40 ಎಂದು ಹೆಸರಿಟ್ಟಿದೆ. ಏಪ್ರಿಲ್ 2022 ರಿಂದ ಇದು ಗ್ರಾಹಕರ ಕೈ ಸೇರಲಿದೆ. Euro NCAP ಈ ಎಲೆಕ್ಟ್ರಿಕ್ ಎಸ್ಯುವಿ ಸುರಕ್ಷತೆಗಾಗಿ ಸಂಪೂರ್ಣ 5-ಸ್ಟಾರ್ ರೇಟಿಂಗ್ ನೀಡಿದೆ.
ಆಧುನಿಕವಾಗಿರುವ ಇವಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಕಾರು 76.6 kWh ಬ್ಯಾಟರಿ ಚಾಲಿತವಾಗಿದ್ದು 240 kWh ಉತ್ಪಾದಿಸುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ, ಈ ಎಸ್‌ಯುವಿಯನ್ನು 425 ಕಿಲೋಮೀಟರ್ವರೆಗೆ ಓಡಿಸಬಹುದು. ಕಾರಿನ ಕ್ಯಾಬಿನ್ ತುಂಬಾ ಐಷಾರಾಮಿಯಾಗಿದ್ದು, ಸ್ಪ್ಲಿಟ್ ಸ್ಕ್ರೀನ್‌ಗಳು ಮತ್ತು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಕೂಡ ಇಲ್ಲಿ ಲಭ್ಯವಿದೆ.