ಜರ್ಮನಿಯ ಐಷಾರಾಮಿ ಕಾರು ಉತ್ಪಾದಕ ಬಿಎಂಡಬ್ಲ್ಯೂ ಭಾರತದಲ್ಲಿ ತನ್ನ ಮೋಟರ್ ಸೈಕಲ್ ಅಂಗ ಬಿಎಂಡಬ್ಲ್ಯೂ ಮೋಟೊರ‍್ರಾಡ್ 2021ರಲ್ಲಿ ಇದುವರೆಗೂ 5,000 ಮೋಟರ್ ಸೈಕಲ್‌ಗಳನ್ನು ಮಾರಾಟ ಮಾಡಿದ್ದಾಗಿ ತಿಳಿಸಿದೆ. 2020ಕ್ಕೆ ಹೋಲಿಸಿದರಲ್ಲಿ 2021ರಲ್ಲಿ 100% ಪ್ರಗತಿ ಸಾಧಿಸಿರುವುದಾಗಿ ಬಿಎಂಡಬ್ಲ್ಯೂ ಹೇಳಿಕೊಂಡಿದೆ.
ಭಾರತದಲ್ಲೇ ಉತ್ಪಾದಿಸಲಾದ ಬಿಎಂಡಬ್ಲ್ಯೂ ಜಿ 310 ಆರ್ ಮತ್ತು ಬಿಎಂಡಬ್ಲ್ಯೂ ಜಿ 310 ಜಿಎಸ್ ಮಾಡೆಲ್‌ಗಳು ಕಂಪನಿಯು ಭಾರತದಲ್ಲಿ ಮಾರಾಟ ಮಾಡಿದ ಮೋಟರ್ ಸೈಕಲ್‌ಗಳ 90% ಪಾಲು ಪಡೆದಿವೆ. ಬಿಎಂಡಬ್ಲ್ಯೂ ಸಮೂಹದ ಇತರೆ ಮಾಡೆಲ್‌ಗಳಾದ ಸಿ 400 ಜಿಟಿ, ಆರ್ 1250 ಜಿಎಸ್/ಜಿಎಸ್‌ಎ, ಆರ್18 ಕ್ಲಾಸಿಕ್, ಎಸ್ 1000 ಆರ್ ಮತ್ತು ಎಂ 1000 ಆರ್‌ಆರ್‌ಗಳೂ ಸಹ ಹಣವಂತ ಮಂದಿಯ ಪೈಕಿ ಪ್ರತಿಷ್ಠೆಯ ಖರೀದಿಗಳಾಗಿವೆ.
ಪಾತ್ರೆ, ನೆಲದ ಮೇಲಿರುವ ತುಕ್ಕು ಕ್ಲೀನ್ ಮಾಡಲು ಈ ಸಲಹೆ ಪಾಲಿಸಿ
ಸಾಂಕ್ರಮಿಕದ ನಡುವೆಯೂ ಬಿಎಂಡಬ್ಲ್ಯೂ ಮೊಟೊರ‍್ರಾಡ್ ಮಾರಾಟದ ವಿಚಾರದಲ್ಲಿ ಒಳ್ಳೆಯ ಪ್ರಗತಿ ಸಾಧಿಸಿದ್ದಾಗಿ ಬಿಎಂಡಬ್ಲ್ಯೂ ಸಮೂಹದ ಭಾರತೀಯ ವಿಭಾಗದ ಅಧ್ಯಕ್ಷ ವಿಕ್ರಮ್ ಪವಾಹ್ ಮಾತನಾಡಿ, “ಭಾರತದಲ್ಲಿ ಪ್ರೀಮಿಯಂ ಬೈಕಿಂಗ್ ವಾತಾವರಣವನ್ನೇ ಬಿಎಂಡಬ್ಲ್ಯೂ ತನ್ನ ಡೈನಾಮಿಕ್ ಉತ್ಪನ್ನಗಳು ಹಾಗೂ ಗ್ರಾಹಕರ ಅಗತ್ಯಗಳಿಗೆ ತಕ್ಕಂತ ರೈಡಿಂಗ್ ಅನುಭವಗಳಿಂದ ಬದಲಾಯಿಸಿದೆ” ಎಂದಿದ್ದಾರೆ.