ಬೆಂಗಳೂರು: ಬಿಎಂಟಿಸಿ ಬಸ್ ಟಿಕೆಟ್ ಪೇಪರ್ ರೋಲ್ ಗಳನ್ನು ಪ್ರಯಾಣಿಕರಿಗೆ ಟಿಕೆಟ್ ನೀಡಲು ಬಳಸುತ್ತಾರೆ. ಆದರೆ ಕಿಡಿಗೇಡಿಗಳು ಟಿಕೆಟ್ ರೋಲ್ ಪೇಪರ್ ಕದ್ದು ತರಕಾರಿ ಅಂಗಡಿಗೆ ಕೊಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಟಿಕೆಟ್ ನೀಡಲು ಬಳಸುವ ಎಲೆಕ್ಟ್ರಿಕ್ ಬಸ್ ನ ಪೇಪರ್ ರೋಲ್ ನ್ನು ವ್ಯಾಪಾರಿಯೊಬ್ಬರು ಹಣ್ಣು ಹಾಗೂ ತರಕಾರಿ ಅಂಗಡಿಯಲ್ಲಿ ಗ್ರಾಹಕರಿಗೆ ಬಿಲ್ ಕೊಡಲು ಬಳಸಿದ್ದು, ಅಚ್ಚರಿಗೆ ಕಾರಣವಾಗಿದೆ.
ಯಲಹಂಕದ ಅಟ್ಟೂರು ಲೇಔಟ್ ನ ಎಸ್ ಆರ್ ಎಸ್ ತರಕಾರಿ ಹಾಗೂ ಹಣ್ಣು ವ್ಯಾಪಾರಿ ಮಳಿಗೆಯಲ್ಲಿ ಟಿಕೆಟ್ ರೋಲ್ ಉಪಯೋಗಿಸಿ , ತರಕಾರಿ ಹಾಗೂ ಹಣ್ಣಿನ ರೇಟ್ ಮುದ್ರಿಸಿ ಕೊಟ್ಟಿದ್ದು, ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಬಿಎಂಟಿಸಿಗೆ ಮಾಹಿತಿ ನೀಡಿದ್ದಾರೆ. ಬಿಎಂಟಿಸಿ ಅಧಿಕರಿಗಳು ಅಂಗಡಿಗೆ ಹೋಗಿ ಪರಿಶೀಲಿಸಿದಾಗ ಎರಡು ಟಿಕೆಟ್ ಪೇಪರ್ ರೋಲ್ ಗಳು ಪತ್ತೆಯಾಗಿವೆ.
ವ್ಯಾಪಾರಿ ಮುರುಳಿಕೃಷ್ಣ ವಿರುದ್ಧ ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿಎಂಟಿಸಿ ಭದ್ರತಾ ಹಾಗೂ ಜಾಗೃತದಳದ ವೈಫಲ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.