ಬೆಂಗಳೂರು: ಕೇಂದ್ರ ಸರ್ಕಾರದ ಸ್ಕ್ರಾಪಿಂಗ್ ನೀತಿಯಂತೆ ಬಿಎಂಟಿಸಿಯಲ್ಲಿ 15 ವರ್ಷ ಮೀರಿದ ಹಳೆ ಬಸ್ ಗಳನ್ನು ಗುಜರಿಗೆ ಹಾಕಲು ನಿರ್ಧರಿಸಿದ್ದು, 550ಕ್ಕೂ ಹೆಚ್ಚು ಬಸ್ ಗಳನ್ನು ಸ್ಕ್ರಾಪ್ ಮಾಡಲು ಗುರುತಿಸಲಾಗಿದೆ.
15 ವರ್ಷ ಮೀರಿದ ಹಳೆ ವಾಹನಗಳನ್ನು ಸಾರಿಗೆ ಇಲಾಖೆ ನಿಗದಿಪಡಿಸಿದೆ. ಹಳೆ ಬಸ್ ಗಳನ್ನು ಸ್ಕ್ರಾಪ್ ಮಾಡಲು ನೀಡುವಂತೆ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿಯಲ್ಲಿ 15 ವರ್ಷ ಮೀರಿದ ಮತ್ತು 9 ಲಕ್ಷ ಕಿಲೋ ಮೀಟರ್ ಗೂ ಹೆಚ್ಚು ದೂರ ಸಂಚರಿಸಿದ ವಾಹನಗಳನ್ನು ಗುಜರಿಗೆ ಹಾಕಲು ನಿರ್ಧರಿಸಲಾಗಿದೆ.
ಬಸ್ ಗಳನ್ನು ಸ್ಕ್ರಾಪ್ ಮಾಡಲು ಖಾಸಗಿ ಸಂಸ್ಥೆ ನೇಮಕ ಮಾಡಲು ಬಿಡ್ ಸಲ್ಲಿಸುವಂತೆ ಸೂಚಿಸಲಾಗಿದ್ದು, ಬಿಡ್ ಸಲ್ಲಿಸುವವರು ಜೂನ್ 5 ಬಿಡ್ ಸಲ್ಲಿಸಿ ಪ್ರತಿ ಬಸ್ ಗೆ ಎಷ್ಟು ಮೊತ್ತವನ್ನು ಬಿಎಂಟಿಸಿಗೆ ನೀಡುತ್ತೇವೆ ಎಂಬುದನ್ನು ತಿಳಿಸಬೇಕಿದೆ. ಇದರೊಂದಿಗೆ ಗುಜರಿ ಬಸ್ ಳ ಮೂಲಕವೂ ಬಿಎಂಟಿಸಿ ಆದಾಯ ಗಳಿಸಲು ನಿರ್ಧರಿಸಿದೆ.