ಬೆಂಗಳೂರು: ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ಗಳನ್ನು ಬಿಡಲು ಬಿಎಂಟಿಸಿ ಮುಂದಾಗಿದ್ದು, ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಬಿಎಂಟಿಸಿ ಸಂಚಾರಕ್ಕೆ ಅನುಮತಿ ನೀಡಿಲಾಗಿದೆ. ಆದರೆ, ಬಿಎಂಟಿಸಿ ಚಿಕ್ಕಬಳ್ಳಾಪುರಕ್ಕೂ ಬಸ್ ಗಳನ್ನು ಬಿಡಲಿದೆ. ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಸಂಚಾರ ವಿಸ್ತರಣೆ ಮಾಡಲು ಮುಂದಾಗಿದೆ ಎನ್ನಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಿಂದ 25 ಕಿಲೋ ಮೀಟರ್ ಬಸ್ ಓಡಿಸಲು ಮಾತ್ರ ಬಿಎಂಟಿಸಿಗೆ ಅವಕಾಶವಿದೆ. ಆದರೆ ನಿಯಮ ಮೀರಿ ಬಿಎಂಟಿಸಿ ಬಸ್ ಓಡಿಸಲು ಸಿದ್ಧವಾಗಿದ್ದು, ಇದಕ್ಕೆ ಕೆಎಸ್ಆರ್ಟಿಸಿ ಆಕ್ಷೇಪ ವ್ಯಕ್ತಪಡಿಸಿದೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಸುಮಾರು 60 ಕಿಲೋಮೀಟರ್ ಅಂತರವಿದ್ದು, ಬಿಎಂಟಿಸಿ ಬಸ್ ಸಂಚಾರ ವಿಸ್ತರಿಸಲು ಅವಕಾಶವಿಲ್ಲವೆಂದು ಕೆಎಸ್ಆರ್ಟಿಸಿ ಹೇಳಿದೆ.
ಬಿಎಂಟಿಸಿ ನಿರ್ಧಾರಕ್ಕೆ ಕೆಎಸ್ಆರ್ಟಿಸಿ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಎಂಟಿಸಿ ನಡೆ ಖಂಡಿಸಿ ಸರ್ಕಾರಕ್ಕೆ ಪತ್ರ ಬರೆಯಲು ಕೆಎಸ್ಆರ್ಟಿಸಿ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.