ಬೆಂಗಳೂರು: ಬಿಎಂಟಿಸಿ ಬಸ್ ಗಳಲ್ಲಿ ಟಿಕೆಟ್ ಪಡೆದುಕೊಳ್ಳುವುದು ಪ್ರಯಾಣಿಕರ ಹೊಣೆಯಾಗಿದೆ. ಇನ್ನುಮುಂದೆ ಟಿಕೆಟ್ ಇಲ್ಲದೆ ಪ್ರಯಾಣಿಕರು ಸಿಕ್ಕಿಬಿದ್ದರೆ ಕಂಡಕ್ಟರ್ ಗೆ ದಂಡ ವಿಧಿಸುವುದಿಲ್ಲ. ಪ್ರಯಾಣಿಕರೇ ದಂಡ ಪಾವತಿಸಬೇಕಾಗುತ್ತದೆ.
ಬಿಎಂಟಿಸಿ ಕಾರ್ಯನಿರ್ವಾಹಕ ನಿರ್ದೇಶಕಿ ಸಿ. ಶಿಖಾ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಬಸ್ ಗಳಲ್ಲಿ ಆಸನ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸುವ ಸಂದರ್ಭದಲ್ಲಿ ನಿಯಮ ಅನ್ವಯವಾಗಲಿದೆ.
ಪ್ರಯಾಣಿಕರು ಟಿಕೆಟ್ ಕೇಳಿ ಪಡೆಯಬೇಕು. ಟಿಕೆಟ್ ಇಲ್ಲದ ಪ್ರಯಾಣಿಕರು ಪತ್ತೆಯಾದರೆ ಕಂಡಕ್ಟರ್ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವುದಿಲ್ಲ, ದಂಡ ಹಾಕುವುದಿಲ್ಲ. ಪ್ರಯಾಣಿಕರೆ ಜವಾಬ್ದಾರರಾಗಿರುತ್ತಾರೆ ಮತ್ತು ಅವರೇ ದಂಡ ಪಾವತಿಸಬೇಕಿದೆ ಎಂದು ಹೇಳಲಾಗಿದೆ.