alex Certify BIG NEWS: ಬಿಎಂಟಿಸಿ ನೌಕರರ ಕುಟುಂಬಕ್ಕೆ ಗುಡ್ ನ್ಯೂಸ್: KSRTC ಮಾದರಿಯಲ್ಲಿಯೇ 1 ಕೋಟಿ ವಿಮಾ ಸೌಲಭ್ಯ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಎಂಟಿಸಿ ನೌಕರರ ಕುಟುಂಬಕ್ಕೆ ಗುಡ್ ನ್ಯೂಸ್: KSRTC ಮಾದರಿಯಲ್ಲಿಯೇ 1 ಕೋಟಿ ವಿಮಾ ಸೌಲಭ್ಯ ಜಾರಿ

ಬೆಂಗಳೂರು: ಬಿಎಂಟಿಸಿ ನೌಕರರ ಕುಟುಂಬಕ್ಕೂ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಕೆ.ಎಸ್.ಆರ್.ಟಿ.ಸಿ ಮಾದರಿಯಲ್ಲಿಯೇ ಬಿಎಂಟಿಸಿ ನೌಕರರ ಕುಟುಂಬಕ್ಕೂ 1 ಕೋಟಿ ರೂಪಾಯಿ ಅಪಘಾತ ವಿಮೆ ಸೌಲಭ್ಯ ಜಾರಿಯಾಗಿದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ಮೇರೆಗೆ ಈ ವಿಮಾ ಸೌಲಭ್ಯ ಇಂದಿನಿಂದಲೇ ಜಾರಿಗೆ ಬರಲಿದೆ. 28 ಸಾವಿರ ನೌಕರರ ಕುಟುಂಬಗಳಿಗೆ ಹೊಸ ವಿಮಾ ಸೌಲಭ್ಯ ಸಿಗಲಿದೆ.

ಈವರೆಗೆ ಕೆ.ಎಸ್.ಆರ್.ಟಿ.ಸಿ ನೌಕರರು ಅಪಘಾತದಲ್ಲಿ ಮೃತಪಟ್ಟರೆ 1 ಕೋಟಿ ಪರಿಹಾರ ನೀಡಲಾಗುತ್ತಿತ್ತು. ಬಿಎಂಟಿಸಿ ನೌಕರರಿಗೆ ಕೇವಲ 3 ಲಕ್ಷ ರೂ ಮಾತ್ರ ಪರಿಹಾರ ನೀಡಲಾಗುತ್ತಿತ್ತು. ಇದೀಗ ಬಿಎಂಟಿಸಿ ನೌಕರರು ಅಪಘಾತದಲ್ಲಿ ಸಾವನ್ನಪ್ಪಿದರೆ ಅವರ ಕುಟುಂಬಗಳಿಗೂ 1 ಕೋಟಿ ವಿಮಾ ಸೌಲಭ್ಯ ನಿದಲಾಗುತ್ತದೆ. ಅಲ್ಲದೇ ಸ್ವಾಭಾವಿಕವಾಗಿ ಸಾವನ್ನಪ್ಪಿದರೆ 10 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ ಎಂದು ಬಿಎಂಟಿಸಿ ಎಂ.ಡಿ.ರಾಮಚಂದ್ರನ್ ಮಾಹಿತಿ ನೀಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...