ಬೆಂಗಳೂರು: ಬಿಎಂಟಿಸಿಗೆ ಇನ್ನೊಂದು ವರ್ಷದಲ್ಲಿ 320 ಎಸಿ ಎಲೆಕ್ಟ್ರಿಕ್ ಬಸ್ ಸೇರ್ಪಡೆಯಾಗಲಿವೆ. ಖಾಸಗಿ ಸಂಸ್ಥೆಯಿಂದ ಬಸ್ ಪೂರೈಕೆ ಮಾಡಲು ಗುತ್ತಿಗೆದಾರನನ್ನು ನೇಮಿಸಲಾಗಿದೆ.
2025ರ ಮಾರ್ಚ್ ಅಂತ್ಯದೊಳಗೆ 320 ಎಸಿ ಎಲೆಕ್ಟ್ರಿಕ್ ಬಸ್ ಗಳನ್ನು ಪೂರೈಸುವಂತೆ ಗುತ್ತಿಗೆ ಸಂಸ್ಥೆಗೆ ಸೂಚನೆ ನೀಡಲಾಗಿದೆ. ಪ್ರಸ್ತುತ ಬಿಎಂಟಿಸಿಯಲ್ಲಿ ಎಸಿ ಇಲ್ಲದ 390 ಎಲೆಕ್ಟ್ರಿಕ್ ಬಸ್ ಗಳಿವೆ. 320 ಎಸಿ ಎಲೆಕ್ಟ್ರಿಕ್ ಬಸ್ ಪಡೆಯಲು ಮುಂದಾದ ಬಿಎಂಟಿಸಿ ಕೆಲವು ತಿಂಗಳ ಹಿಂದೆ ಟೆಂಡರ್ ಪ್ರಕ್ರಿಯೆ ನಡೆಸಿದ್ದು, OHM ಗ್ಲೋಬಲ್ ಮಿಬಿಲಿಟಿ ಸಂಸ್ಥೆಗೆ ಗುತ್ತಿಗೆ ಕಾರ್ಯಾದೇಶ ನೀಡಲಾಗಿದೆ.
ಸಂಸ್ಥೆಯು ಹಂತ ಹಂತವಾಗಿ ಎಲೆಕ್ಟ್ರಿಕ್ ಬಸ್ ಗಳನ್ನು ಬಿಎಂಟಿಸಿಗೆ ನೀಡಲಿದೆ. ಒಂದು ವರ್ಷದಲ್ಲಿ ಬಿಎಂಟಿಸಿಗೆ ನೀಡಲಿದೆ. ಬಸ್ ಗಳನ್ನು ಸಂಸ್ಥೆಯೇ ನಿರ್ವಹಣೆ ಮಾಡಲಿದೆ ಎಂದು ಹೇಳಲಾಗಿದೆ.