
ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ವೃದ್ಧೆಯ ಚಿನ್ನದ ಸರ ಕಳವು ಮಾಡಲಾಗಿದೆ. ಬೆಂಗಳೂರಿನ ಹೆಸರಘಟ್ಟ ರಸ್ತೆಯ ಬೋನ್ ಮಿಲ್ ಬಳಿ ಘಟನೆ ನಡೆದಿದೆ.
ಪ್ರೇಮಮ್ಮ ಎಂಬುವರ ಎರಡು ಲಕ್ಷ ರೂಪಾಯಿ ಮೌಲ್ಯದ 25 ಗ್ರಾಂ ಚಿನ್ನದ ಸರ ದೋಚಲಾಗಿದೆ. ಪ್ರೇಮಮ್ಮ ಸಂಬಂಧಿ ನಿಖಿಲ್ ಮನೆಗೆ ಬಿಎಂಟಿಸಿ ಬಸ್ ನಲ್ಲಿ ಬರುತ್ತಿದ್ದಾಗ ಘಟನೆ ನಡೆದಿದೆ. ಸರ ಕಳೆದುಕೊಂಡ ಅವರು ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.