ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಅಪಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಒಂದೇ ವರ್ಷದಲ್ಲಿ 34 ಜನರು ಬಿಎಂಟಿಸಿ ಬಸ್ ಗೆ ಬಲಿಯಾಗಿದ್ದಾರೆ.
ಸಂಚಾರಿ ನಿಯಮ ಉಲ್ಲಂಘನೆ, ಚಾಕಲರ ನಿರ್ಲಕ್ಷವೇ ಬಿಎಂಟಿಸಿ ಬಸ್, ಕೆ ಎಸ್ ಆರ್ ಟಿಸಿ ಬಸ್ ಅಪಘಾತಕ್ಕೆ ಕಾರಣ ಎಂಬುದು ಬಯಲಾಗಿದೆ.
ಈ ವರ್ಷ ಬಿಎಂಟಿಸಿ ಬಸ್ ನಿಂದ 34 ಜನರು ಸಾವನ್ನಪ್ಪಿದ್ದಾರೆ. 97 ಜನರು ಅಪಘಾತದಲ್ಲಿ ಗಾಯಗೊಂಡಿದ್ದಾರೆ . ಕೆ ಎಸ್ ಆರ್ ಟಿಸಿ ಯಿಂದ 10 ಜನರು ಸಾವನ್ನಪ್ಪಿದ್ದರೆ 28 ಜನರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
13,917 ಬಾರಿ ಬಿಎಂಟಿಸಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದೆ. ಕೆ ಎಸ್ ಆರ್ ಟಿಸಿ 3,347 ಸಂಚಾರಿ ನಿಯಮ ಉಲ್ಲಂಘನೆ ಮಾಡಿದೆ. ಈ ಹಿನ್ನೆಯಲ್ಲಿ ಬಿಎಂಟಿಸಿ ಒಂದು ಕೋಟಿ ನಾಲ್ಕು ಲಕ್ಷದ ಹತ್ತು ಸಾವಿರ ರೂ. ದಂಡ ಪಾವತಿಸಿದೆ. ಕೆ ಎಸ್ ಆರ್ ಟಿಸಿ 14 ಲಕ್ಷ ರೂ. ದಂಡ ಪಾವತಿಸಿದೆ.
2020ರಲ್ಲಿ ಬಿಎಂಟಿಸಿ ಬಸ್ ಗೆ 22 ಜನರು ಬಲಿಯಾಗಿದ್ದಾರೆ. 49 ಜನರು ಗಾಯಗೊಂಡಿದ್ದಾರೆ. 2021ರಲ್ಲಿ 27 ಜನರು ಸಾವನ್ನಪ್ಪಿದ್ದರೆ 58 ಜನರು ಗಾಯಗೊಂಡಿದ್ದಾರೆ. 2022ರಲ್ಲಿ 37 ಜನರು ಬಲಿಯಾಗಿದ್ದರೆ 85 ಜನರು ಗಾಯಗೊಂಡಿದ್ದಾರೆ. ಇನ್ನು 2023ರಲ್ಲಿ 34 ಜನರು ಸಾವನ್ನಪ್ಪಿದ್ದರೆ 97 ಜನರು ಗಾಯಗೊಂಡಿದ್ದಾರೆ.