ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬಸ್ ಟಿಕೆಟ್, ಪಾಸ್ ದರಗಳನ್ನು ಕಡಿತ ಮಾಡಲು ನಿರ್ಧರಿಸಿದೆ.
ಬಿಎಂಟಿಸಿ ಹವಾನಿಯಂತ್ರಿತ ವಜ್ರ ಸೇವೆಗಳಿಗೆ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲು ಜನವರಿ 1 ರಿಂದ ಬಸ್ ದರಗಳು, ಮಾಸಿಕ ಮತ್ತು ದೈನಂದಿನ ಪಾಸ್ ದರವನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಶುಲ್ಕ ಮತ್ತು ಪಾಸ್ ದರಗಳು ಸುಮಾರು ಶೇಕಡ 20 ರಷ್ಟು ಕಡಿಮೆಯಾಗುತ್ತವೆ. ಸಾಮಾನ್ಯ ಬಸ್ ಗಳು ಮತ್ತು ವಾಯುವಜ್ರ ಸೇವೆಗಳ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ.