ಬೆಂಗಳೂರು: ವಿದ್ಯಾರ್ಥಿ ಬಸ್ ಪಾಸ್ ಗೆ ದಿನದ 24 ಗಂಟೆಯೂ ಮಾನ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳು ತಮಗೆ ನೀಡಿದ ಬಸ್ ಪಾಸ್ ಬಳಸಿಕೊಂಡು ದಿನದ 24 ಗಂಟೆಯೂ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸಬಹುದಾಗಿದೆ.
ವಿದ್ಯಾರ್ಥಿ ಪಾಸ್ ಗಳಿಗೆ ಸಂಜೆ 7.30ರ ನಂತರ ಮಾನ್ಯ ಮಾಡುವುದಿಲ್ಲ ಎಂದು ಕೆಲವು ನಿರ್ವಾಹಕರು ವಿದ್ಯಾರ್ಥಿಗಳಿಗೆ ಟಿಕೆಟ್ ಕೊಡುತ್ತಿದ್ದರು. ಈ ಕುರಿತಾಗಿ ವಿದ್ಯಾರ್ಥಿಗಳು ಬಿಎಂಟಿಸಿ ಕಚೇರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳಿಂದ ನಿರ್ವಾಹಕರು ಟಿಕೆಟ್ ಪಡೆಯುವಂತಿಲ್ಲ. ವಿದ್ಯಾರ್ಥಿಗಳು ತಮಗೆ ನೀಡಿದ ಬಸ್ ಪಾಸ್ ಬಳಸಿಕೊಂಡು ದಿನದ ಯಾವುದೇ ಸಮಯದಲ್ಲಿಯೂ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸಬಹುದು ಎಂದು ಹೇಳಲಾಗಿದೆ.