ಬೆಂಗಳೂರು: ಎಲ್ಲಾ ಮಾದರಿಯ ಬಿಎಂಟಿಸಿ ಬಸ್ ಪಾಸ್ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಬಿಎಂಟಿಸಿ ವತಿಯಿಂದ ಪಾಸ್ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಏಪ್ರಿಲ್ ತಿಂಗಳ ಕಾಲಾವಧಿ ಮೇ 16 ರವರೆಗೆ ವಿಸ್ತರಣೆ ಮಾಡಲಾಗಿದೆ. ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರ ಕೈಗೊಂಡಿದ್ದ ಹಿನ್ನಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ನಂತರದಲ್ಲಿ ಕೆಲವು ಬಸ್ ಸಂಚಾರ ಆರಂಭವಾದರೂ, ವ್ಯತ್ಯಯವಾಗಿದ್ದ ಹಿನ್ನಲೆಯಲ್ಲಿ ಪಾಸ್ ಹೊಂದಿದವರಿಗೆ ಅವಧಿ ಮುಗಿಯುವ ಆತಂಕ ಎದುರಾಗಿತ್ತು. ಮುಷ್ಕರದಿಂದಾದ ತೊಂದರೆ ಕಾರಣಕ್ಕೆ ಮೇ 16 ರ ವರೆಗೆ ಬಸ್ ಪಾಸ್ ಅವಧಿ ವಿಸ್ತರಿಸಲಾಗಿದೆ ಎಂದು ಹೇಳಲಾಗಿದೆ.