ಬೆಂಗಳೂರು: ಬಿಎಂಟಿಸಿ ಬಸ್ ಓಡಿಸುತ್ತಿದ್ದ ಬಸ್ ಚಾಲಕನಿಗೆ ಏಕಏಕಿ ಲಘು ಹೃದಯಾಘಾತವಾಗಿದ್ದು, ಸಂಚಾರಿ ಪೊಲೀಸರು ಸಮಯ ಪ್ರಜ್ಞೆ ಮೆರೆದು ತಕ್ಷಣ ಆಸ್ಪತ್ರೆಗೆ ದಾಖಲುಸಿ ಜೀವ ಉಳಿಸಿದ್ದಾರೆ.
ಬೆಂಗಳೂರಿನ ಶಾಂತಿನಗರದ ಜೋಡಿ ರಸ್ತೆ ಬಳಿ ಬಿಎಂಟಿಸಿ ಬಸ್ ಚಲಿಸುತ್ತಿದ್ದಗಲೇ ಬಸ್ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದೆ. ಹಠಾತ್ ಹೃದಯಾಘತವಾಗಿದೆ. ನಡುರಸ್ತೆಯಲ್ಲಿಯೇ ಏಕಾಏಕಿ ಬಸ್ ಸ್ಲೋ ಆಗಿದ್ದನ್ನು ಗಮನಿಸಿದ ಸಂಚಾರಿ ಪೊಲೀಸರು ತಕ್ಷಣ ಓಡಿ ಬಂದಿದ್ದಾರೆ. ಅಷ್ಟೊತ್ತಿಗಗಲೇ ಚಾಲಕ ವೀರೇಶ್ ಎದೆಹಿಡಿದುಕೊಂಡು ಬಸ್ ನಲ್ಲೇ ಕುಸಿದು ಬೀಳುತ್ತಿದ್ದರು.
ತಕ್ಷಣ ಟ್ರಾಫಿಕ್ ಪೊಲೀಸ್ ರಘುಕುಮಾರ್, ಚಾಲಕನನ್ನು ಬಸ್ ನಿಂದ ಕೆಳಗಿಳಿಸಿ ಇನ್ನೋರ್ವ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಪ್ರಸನ್ನಕುಮಾರ್ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಕ್ಷಣ ಚಿಕಿತ್ಸೆ ಪಡೆದ ಕಾರಣ ಚಾಲಕ ವೀರೇಶ್ ಬಚಾವ್ ಆಗಿದ್ದಾರೆ. ಬಸ್ ನಲ್ಲಿ ಒಟ್ಟು 45 ಪ್ರಯಾಣಿಕರು ಇದ್ದರು. ಟ್ರಾಫಿಕ್ ಪೊಲೀಸರ ಸಮಯಪ್ರಜ್ಞೆಯಿಂದ ಚಾಲಕನ ಪ್ರಾಣ ಉಳಿದಿದೆ. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.