
ಬೆಂಗಳೂರು: ಬಿಎಂಟಿಸಿ ಬಸ್ ಕಂಡಕ್ಟರ್ ಗೆ ವ್ಯಕ್ತಿಯೋರ್ವ ಚಾಕು ಇರಿದ ಘಟನೆ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪ್ರಯಾಣಿಕನೊಬ್ಬ ಸ್ಕ್ರೂಡ್ರೈವರ್ ತೋರಿಸಿ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಬೆದರಿಕೆಯೊಡ್ಡಿದ್ದಾನೆ.
ಬಿಎಂಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕ ಇಬ್ಬರಿಗೂ ಪ್ರಯಾಣಿಕನೊಬ್ಬ ಸ್ಕ್ರೂಡ್ರೈವರ್ ನಿಂದ ಬೆದರಿಕೆ ಹಾಕಿದ್ದಾನೆ. ಅತ್ತಿಬೆಲೆಯಿಂದ ಮೆಜೆಸ್ಟಿಕ್ ಗೆ ಹೋಗುತ್ತಿದ್ದ ಬಸ್ ನಲ್ಲಿ ಈ ಘಟನೆ ನಡೆದಿದೆ.
ಕೊನಪ್ಪನ ಅಗ್ರಹಾರದಲ್ಲಿ ವ್ಯಕ್ತಿ ಬಸ್ ಹತ್ತಿದ್ದ. ಈ ವೇಳೆ ಪ್ರಯಾಣಿಕರಿಗೆ ಟಿಕೆಟ್ ಕೊಡಲು ಕೆಲ ಸಮಯ ಅದೇ ನಿಲ್ದಾಣದಲ್ಲಿ ಕಂಡಕ್ಟರ್ ಬಸ್ ನಿಲ್ಲಿಸಿದ್ದಾರೆ. ಇದರಿಂದ ಕೋಪಗೊಂಡ ವ್ಯಕ್ತಿ ಹೊಸರೋಡ್ ಬಸ್ ನಿಲ್ದಾಣದ ಬಳಿ ಬಸ್ ನಿಂದ ಇಳಿದು ಬ್ಯಾಗ್ ನಲ್ಲಿದ್ದ ಸ್ಕ್ರೂಡ್ರೈವರ್ ತೆಗೆದು, ಚಾಲಕ ಹಾಗೂ ನಿರ್ವಾಹಕನಿಗೆ ತೋರಿಸಿ ಚುಚ್ಚಿ ಬಿಡುತ್ತೇನೆ ಎಂದು ಆವಾಜ್ ಹಾಕಿದ್ದಾನೆ.