ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಬಸ್ ದಿನಕ್ಕೊಬ್ಬರನ್ನು ಬಲಿ ಪಡೆಯುತ್ತಿದೆ. ಬೈಕ್ ಸವಾರನೊಬ್ಬ ಬಿಎಂಟಿಸಿ ಬಸ್ ಚಕ್ರದಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಬಸ್, ಕೆಳಗೆ ಬಿದ್ದಿದ್ದ ಆತನ ಮೇಲೆಯೇ ಹರಿದು ಹೋಗಿದೆ. ಬಸ್ ಚಕ್ರದಡಿ ಸಿಲುಕಿದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನ ಉತ್ತರಹಳ್ಳಿಯ ಅಲ್ಫೈನ್ ಅಪಾರ್ಟ್ ಮೆಂಟ್ ಬಳಿ ಈ ದುರಂತ ಸಂಭವಿಸಿದೆ.
ತೇಜಸ್ (22) ಮೃತ ದುರ್ದೈವಿ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.