ಬೆಂಗಳೂರು: ಬಿಎಂಟಿಸಿ ಸಿಬ್ಬಂದಿಗಳ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಬಾಕಿ ಇದ್ದ ಶೇ.50ರಷ್ಟು ವೇತನ ಬಿಡುಗಡೆ ಮಾಡಲಾಗಿದೆ.
ಸೆಪ್ಟೆಂಬರ್ ತಿಂಗಳ ಬಾಕಿ ವೇತನ 29.91 ಕೋಟಿ ರೂಪಾಯಿ ಹಾಗೂ ಅಕ್ಟೋಬರ್ ತಿಂಗಳ ಬಾಕಿ ವೇತನ 30.16 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ.
ವೇತನ ಪಾವತಿಗೆ ಆಗ್ರಹಿಸಿ ಬಿಎಂಟಿಸಿ ಸಿಬ್ಬಂದಿಗಳು ಮುಷ್ಕರ ನಡೆಸಿದ್ದರು. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರದ ಆರ್ಥಿಕ ಅನುದಾನದಿಂದ ಬಿಎಂಟಿಸಿ ಸಿಬ್ಬಂದಿಗಳ ಬಾಕಿ ಮೊತ್ತ ಪಾವತಿಸಲಾಗಿದೆ.