
ವಿಟಮಿನ್ ನಮ್ಮ ದೇಹಕ್ಕೆ ಬಹಳ ಅವಶ್ಯಕವಾಗಿದೆ. ಏಕೆಂದರೆ ಇದು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ವಿಟಮಿನ್ ಬಿ 12 ಕೂಡ ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶ. B12 ಕೊರತೆಯಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೇಹದಲ್ಲಿನ ಈ ಪೋಷಕಾಂಶದ ಕಾರ್ಯವು ಡಿಎನ್ ಅನ್ನು ತಯಾರಿಸುವುದು ಮತ್ತು ಫೋಲಿಕ್ ಆಮ್ಲವನ್ನು ಹೀರಿಕೊಳ್ಳುವುದು. ಅದಕ್ಕಾಗಿಯೇ ನಾವು ವಿಟಮಿನ್ ಬಿ 12 ಇರುವ ಆಹಾರಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು.
ಇಲ್ಲದಿದ್ದರೆ ಅನೇಕ ಅಪಾಯಕಾರಿ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ವಿಟಮಿನ್ ಬಿ 12 ಕೊರತೆಯಿಂದ ಉಂಟಾಗುವ ಹಾನಿಯೇನು ಅನ್ನೋದನ್ನು ನೋಡೋಣ.ಮರೆವು – ವಿಟಮಿನ್ ಬಿ12 ಕೊರತೆ ಉಂಟಾದರೆ ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಲವಾರು ಮಾನಸಿಕ ಕಾಯಿಲೆಗಳಿಗೆ ತುತ್ತಾಗುವ ಅಪಾಯವಿರುತ್ತದೆ. ಜ್ಞಾಪಕ ಶಕ್ತಿ ಕುಂಠಿತವಾಗುತ್ತದೆ ಮತ್ತು ಸಣ್ಣಪುಟ್ಟ ವಿಷಯಗಳನ್ನೂ ಅವರು ಮರೆತುಬಿಡುತ್ತಾರೆ.
ಕಣ್ಣಿನ ದೃಷ್ಟಿ ದುರ್ಬಲ
ವಿಟಮಿನ್ ಬಿ 12 ಇರುವ ಆಹಾರವನ್ನು ಸೇವಿಸದಿದ್ದರೆ ಅದು ಕಣ್ಣುಗಳ ಮೇಲೆ ಪರಿಣಾಮ ಬೀರಬಹುದು. ಸಾಮಾನ್ಯವಾಗಿ ಸಣ್ಣ ಅಕ್ಷರಗಳನ್ನು ಓದುವಾಗ ದೃಷ್ಟಿ ದುರ್ಬಲಗೊಳ್ಳುವುದು, ದೃಷ್ಟಿ ಮಂದವಾಗುವುದು ಮತ್ತು ಕಣ್ಣುಗಳಲ್ಲಿ ನೋವು ಮುಂತಾದ ಸಮಸ್ಯೆಗಳು ಬರುತ್ತವೆ.
ರಕ್ತಹೀನತೆ
ವಿಟಮಿನ್ ಬಿ 12 ಕೊರತೆಯಿದ್ದರೆ ರಕ್ತಹೀನತೆ ಕೂಡ ಕಾಣಿಸಿಕೊಳ್ಳುತ್ತದೆ. ಈ ಪೋಷಕಾಂಶದ ಕೊರತೆಯಿಂದ ನಮ್ಮ ದೇಹದಲ್ಲಿನ ಕೆಂಪು ರಕ್ತ ಕಣಗಳ ಉತ್ಪಾದನೆಯು ನಿಧಾನವಾಗಬಹುದು, ಇದರಿಂದಾಗಿ ರಕ್ತಹೀನತೆ ಉಂಟಾಗಬಹುದು.
ಮೂಳೆಗಳಲ್ಲಿ ನೋವು
ನಿಮಗೆ ಮೂಳೆಗಳಲ್ಲಿ ನೋವಿದ್ದರೆ ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿದೆ ಎಂದು ಅರ್ಥಮಾಡಿಕೊಳ್ಳಿ ಮತ್ತು ಸಾಧ್ಯವಾದಷ್ಟು ಬೇಗ ಅಗತ್ಯ ಆಹಾರಗಳನ್ನು ತಿನ್ನಲು ಪ್ರಾರಂಭಿಸಿ. ಇಲ್ಲದಿದ್ದರೆ ಬೆನ್ನು ಮತ್ತು ಸೊಂಟದಲ್ಲಿ ನೋವು ವಿಪರೀತವಾಗಿರುತ್ತದೆ.