ಹಸಿರು ಅಥವಾ ನೀಲಿ ಬಣ್ಣದ ನಾಯಿ ನೋಡಿದ್ದೀರಾ? ಇಲ್ಲ ಅಂದ್ರೆ ನಾವು ತೋರಿಸ್ತೆವೆ ನೋಡಿ. ರಷ್ಯಾದಲ್ಲಿ ನೀಲಿ ಬಣ್ಣದ ನಾಯಿಗಳು ಕಾಣಸಿಗ್ತಿವೆ.
ರಷ್ಯಾದ ರಾಜಧಾನಿ ಮಾಸ್ಕೋದಿಂದ ಸುಮಾರು 370 ಕಿಮೀ ದೂರದಲ್ಲಿರುವ ಡಿಜೆರ್ಜಿನ್ಸ್ಕ್ ನಗರದ ಬೀದಿಗಳಲ್ಲಿ ನೀಲಿ ನಾಯಿಗಳು ಕಾಣಸಿಗ್ತಿವೆ, ಪ್ಲೆಕ್ಸಿಗ್ಲಾಸ್ ಮತ್ತು ಹೈಡ್ರೋಸಯಾನಿಕ್ ಆಸಿಡ್ ಹಾನಿಕಾರಕ ರಾಸಾಯನಿಕಗಳಿಂದಾಗಿ ನಾಯಿಗಳು ನೀಲಿ ಬಣ್ಣಕ್ಕೆ ತಿರುಗುತ್ತಿವೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.
ಹೈಡ್ರೋಜನ್ ಸೈನೈಡ್ ಅನ್ನು ನೀರಿನೊಂದಿಗೆ ಬೆರೆಸಿದಾಗ ಈ ಆಮ್ಲವು ರೂಪುಗೊಳ್ಳುತ್ತದೆ. ಹೈಡ್ರೋಜನ್ ಸೈನೈಡ್ ಅತ್ಯಂತ ವಿಷಕಾರಿ ಸಂಯುಕ್ತವಾಗಿದೆ. ಇದು ನಾಯಿಗಳ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದ್ರೆ ರಾಸಾಯನಿಕದ ಪರಿಣಾಮದ ಬಗ್ಗೆ ಕಳವಳ ವ್ಯಕ್ತವಾಗಿದೆ. ರಾಸಾಯನಿಕಗಳು ಚರ್ಮದ ಮೇಲೆ ಕಿರಿಕಿರಿಯುಂಟು ಮಾಡುತ್ತವೆ. ತುರಿಕೆಗೆ ಕಾರಣವಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕಿಲ್ಲವೆಂದ್ರೆ ಅನಾರೋಗ್ಯ ಪ್ರಾಣಕ್ಕೆ ಕುತ್ತು ತರಬಹುದು ಎಂದು ತಜ್ಞರು ಹೇಳಿದ್ದಾರೆ.
ಭಾರತದಲ್ಲೂ ಇಂಥ ಪ್ರಕರಣ ಬೆಳಕಿಗೆ ಬಂದಿತ್ತು. ಸುಮಾರು ನಾಲ್ಕು ವರ್ಷಗಳ ಹಿಂದೆ, ಆಗಸ್ಟ್ 2017 ರಲ್ಲಿ, ಮುಂಬೈನ ಕಾರ್ಖಾನೆಯೊಂದು, ತ್ಯಾಜ್ಯ ಮತ್ತು ಬಣ್ಣವನ್ನು ಹತ್ತಿರದ ನದಿಗೆ ಎಸೆಯಲು ಆರಂಭಿಸಿತ್ತು. ಇದ್ರಿಂದ ಸುಮಾರು 11 ನಾಯಿಗಳ ಬಣ್ಣ ನೀಲಿಯಾಗಿತ್ತು.