alex Certify ನೀಲಿ ಬಣ್ಣದ ಆಧಾರ್‌ ಕಾರ್ಡ್ ಯಾರಿಗೆ…? ಅರ್ಜಿ ಸಲ್ಲಿಸುವುದು ಹೇಗೆ…? ಇಲ್ಲಿದೆ ಈ ಕುರಿತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀಲಿ ಬಣ್ಣದ ಆಧಾರ್‌ ಕಾರ್ಡ್ ಯಾರಿಗೆ…? ಅರ್ಜಿ ಸಲ್ಲಿಸುವುದು ಹೇಗೆ…? ಇಲ್ಲಿದೆ ಈ ಕುರಿತ ಮಾಹಿತಿ

ಪ್ರತಿಯೊಬ್ಬರೂ ಆಧಾರ್‌ ಕಾರ್ಡ್‌ಗೆ ನೋಂದಣಿ ಆಗಬಹುದಾಗಿದೆ. ಇತ್ತೀಚೆಗಷ್ಟೇ ಜನಿಸಿದ ಮಕ್ಕಳಿಗೂ ಬಾಲ ಆಧಾರ್‌ ಸೇವೆಗಳು ಈಗ ಲಭ್ಯವಿವೆ.

ಬಹಳಷ್ಟು ಉಪಯುಕ್ತ ಕೆಲಸಗಳಿಗೆ ಆಧಾರ್‌ ಕಾರ್ಡ್ ಅತ್ಯಗತ್ಯವಾಗಿದೆ. 12-ಅಂಕಿಯ ಈ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ವಿತರಿಸುತ್ತದೆ. ಬಯೋಮೆಟ್ರಿಕ್ ಹಾಗೂ ವ್ಯಕ್ತಿಯ ಗುರುತಿನ ವಿವರಗಳನ್ನು ಹೊಂದಿರುವ ಆಧಾರ್‌ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ?

ʼವಾಟರ್‌ ಬಾಟಲ್‌ʼ ಸುಲಭವಾಗಿ ಸ್ವಚ್ಛಗೊಳಿಸಲು ಇದು ಬೆಸ್ಟ್

ವಯಸ್ಕರಿಗೆ ಆಗುವಂತೆ ಮಕ್ಕಳಿಗೂ ಸಹ ಬಾಲ್ ಆಧಾರ್‌ ಮಾಡಿಸಲು ಪ್ರಕ್ರಿಯೆಗಳು ಇವೆ. ಇದಕ್ಕಾಗಿ ನೀವು ಅರ್ಜಿಯೊಂದನ್ನು ಭರ್ತಿ ಮಾಡಿ ನೋಂದಣಿ ಕೇಂದ್ರದಲ್ಲಿ ಸೂಕ್ತ ದಾಖಲೆಗಳನ್ನು ಒದಗಿಸಿ, ಜೊತೆಯಲ್ಲಿ ಗುರುತಿನ ಸಾಕ್ಷ್ಯ, ವಿಳಾಸದ ಸಾಕ್ಷ್ಯ, ಸಂಬಂಧದ ಸಾಕ್ಷ್ಯ, ಜನ್ಮ ದಿನಾಂಕದ ಸಾಕ್ಷ್ಯಗಳನ್ನು ಒದಗಿಸಬೇಕು.

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಗರಿಷ್ಠ ಮಟ್ಟಕ್ಕೇರಿದ ಪೆಟ್ರೋಲ್ ದರ

ಬಾಲ್ ಆಧಾರ್‌ ಕುರಿತ ಆಸಕ್ತಿಕರ ವಿಷಯಗಳು ಇಂತಿವೆ:

1. ಐದು ವರ್ಷದ ಒಳಗಿನ ಮಕ್ಕಳಿಗೆ ನೀಲಿ ಬಣ್ಣದ ಬಾಲ್ ಆಧಾರ್‌ ಕಾರ್ಡ್ ವಿತರಿಸಲಾಗುವುದು ಹಾಗೂ ಮಗುವಿಗೆ ಐದು ವರ್ಷಗಳು ತುಂಬಿದ ಮೇಲೆ ಈ ಕಾರ್ಡ್ ಅಸಿಂಧುವಾಗುತ್ತದೆ.

2. ನಿಮ್ಮ ಮಗುವಿನ ಶಾಲೆಯ ಗುರುತಿನ ಕಾರ್ಡ್ಅನ್ನು ಆತನ/ಆಕೆಯ ಆಧಾರ್‌ ನೋಂದಣಿಗೆ ಅಗತ್ಯವಿದೆ.

ಈ‌ ವಿಶೇಷ ʼಬೆಣ್ಣೆʼ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ……!

3. ನಿಮ್ಮ ಮಗುವಿಗೆ ಐದು ವರ್ಷಗಳು ತುಂಬುತ್ತಲೇ ಹಾಗೂ ಇದಾದ ಬಳಿಕ 15 ವರ್ಷಗಳು ತುಂಬುತ್ತಲೇ ಆಧಾರ್‌ನ ಬಯೋಮೆಟ್ರಿಕ್ ದತ್ತಾಂಶವನ್ನು ಮೇಲ್ದರ್ಜೆಗೇರಿಸುವುದನ್ನು ಮರೆಯದಿರಿ. ಈ ಕಡ್ಡಾಯ ಬಯೋಮೆಟ್ರಿಕ್ ಅಪ್ಡೇಟ್‌ ಅನ್ನು ಮಕ್ಕಳಿಗೆ ಉಚಿತವಾಗಿ ಮಾಡಿಕೊಡಲಾಗುತ್ತದೆ.

4. ನಿಮ್ಮ ಆಧಾರ್‌‌ ಕಾರ್ಡ್‌‌ ಅನ್ನು ಮಗುವಿನ ಜನನ ಪ್ರಮಾಣ ಪತ್ರ ಹಾಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವಿವರಗಳು ನಿಮ್ಮ ಮಗುವನ್ನು ಆಧಾರ್‌‌ಗೆ ನೋಂದಣಿ ಮಾಡಿಸಲು ಸಾಕು.

5. ಮಗುವಿನ ಆಧಾರ್‌ ದತ್ತಾಂಶದಲ್ಲಿ ಬೆರಳಚ್ಚು ಹಾಗೂ ಐರಿಸ್ ಸ್ಯ್ಯಾನ್‌ನಂಥ ಬಯೋಮೆಟ್ರಿಕ್ ಮಾಹಿತಿಗಳು ಇರುವುದಿಲ್ಲ. ಒಮ್ಮೆ ಮಗುವಿನ ವಯಸ್ಸು ಐದು ವರ್ಷ ದಾಟಿದ ಬಳಿಕ ಬಯೋಮೆಟ್ರಿಕ್ ದತ್ತಾಂಶಗಳನ್ನು ಸೇರಿಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...