
ನವದೆಹಲಿ: ಹೃದಯಾಘಾತ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜೀವ ರಕ್ಷಣೆ ಬಗ್ಗೆ ಹಿರಿಯ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ 9ನೇ ತರಗತಿಯಿಂದ ಆರಂಭಿಸಿ ಮಕ್ಕಳಿಗೆ ಬೇಸಿಕ್ ಲೈಫ್ ಸಪೋರ್ಟ್(ಬಿಎಲ್ಎಸ್) ಬಗ್ಗೆ ಪಠ್ಯದ ಮೂಲಕ ತರಬೇತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಇತ್ತೀಚೆಗೆ ರಾಜ್ಯಸಭೆಯಲ್ಲಿ ಪಂಜಾಬ್ ಸಂಸದ ಸಂತ್ ಬಲ್ ಬೀರ್ ಸಿಂಗ್ ಸೀಛೇವಾಲ್ ಅವರು ಈ ಬಗ್ಗೆ ಧ್ವನಿಯೆತ್ತಿದ್ದರು. ಅವರ ಸಲಹೆಯನ್ನು ಸ್ವೀಕರಿಸಿ ತರಬೇತಿಗೆ ಮುಂದಾಗಿದ್ದೇವೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಹಾಯಕ ಸಚಿವ ಜಯಂತ್ ಚೌಧರಿ ತಿಳಿಸಿದ್ದಾರೆ.
9ನೇ ತರಗತಿಗೆ ಬಿಎಲ್ಎಸ್(ಬೇಸಿಕ್ ಲೈಫ್ ಸಪೋರ್ಟ್) ಕಡ್ಡಾಯವಾಗಿದೆ. ದೈಹಿಕ ಶಿಕ್ಷಣ ಹಾಗೂ ಫಿಟ್ನೆಸ್ ಪಠ್ಯದಲ್ಲಿ ಈ ವಿಷಯವನ್ನು ಸೇರ್ಪಡೆ ಮಾಡಲಾಗುವುದು ಎಂದು ಹೇಳಲಾಗಿದೆ.