ಕಾರ್ತಿಕ ಮಾಸ ವಿಶೇಷತೆ ಹೊಂದಿದ್ದು ಈ ತಿಂಗಳಿನಲ್ಲಿ ಜನರು ವಿಷ್ಣು ಹಾಗೂ ಲಕ್ಷ್ಮಿ ಆರಾಧನೆ ಮಾಡ್ತಾರೆ. ಇದೇ ವೇಳೆ ಸಂಪತ್ತಿನ ಅಧಿದೇವತೆ ಜೊತೆ ಶಂಖವನ್ನು ಕೂಡ ಪೂಜೆ ಮಾಡುವ ಸಂಪ್ರದಾಯವಿದೆ. ದೇವಿ ಪೂಜೆ ವೇಳೆ ಶಂಖದ ಪೂಜೆ ಮಾಡಿದ್ರೆ ಮಂಗಳಕರ ಫಲ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಶಂಖವನ್ನು ಲಕ್ಷ್ಮಿಯ ಸಹೋದರ ಎಂದು ಹೇಳಲಾಗುತ್ತದೆ. ಬಹುತೇಕ ಎಲ್ಲ ದೇವರು ಕೈನಲ್ಲಿ ಶಂಖ ಹಿಡಿದಿರುವುದನ್ನು ನೀವು ನೋಡಬಹುದು.
ಪ್ರತಿ ದಿನ ಪೂಜೆ ನಂತ್ರ ಶಂಖ ಊದಬೇಕು ಎನ್ನಲಾಗುತ್ತದೆ. ಶಂಖ ಊದಿದ್ರೆ ನಕಾರಾತ್ಮಕ ಶಕ್ತಿ ಮನೆಯಿಂದ ಓಡಿ ಹೋಗುತ್ತದೆ. ಮನೆಯಲ್ಲಿರುವ ದಾರಿದ್ರ್ಯ, ರೋಗ, ನೋವು ದೂರವಾಗುತ್ತದೆ ಎಂದು ನಂಬಲಾಗಿದೆ. ಸುಖ, ಆರ್ಥಿಕ ವೃದ್ಧಿ, ಸಂತೋಷ ಪ್ರಾಪ್ತಿಯಾಗಬೇಕು ಅಂದ್ರೆ ಪ್ರತಿ ದಿನ ಶಂಖವನ್ನು ಊದಬೇಕು. ಶಂಖದಲ್ಲಿ ಸಾಕಷ್ಟು ಶಕ್ತಿಯಿದೆ. ಶಂಖದ ಕೆಲ ಉಪಾಯಗಳು ನಿಮ್ಮ ಸಮಸ್ಯೆಗೆ ಪರಿಹಾರ ನೀಡಬಲ್ಲವು.
ಹಣದ ಸಮಸ್ಯೆ ಮನೆಯಲ್ಲಿ ಬೆಂಬಿಡದೆ ಕಾಡ್ತಿದ್ದರೆ ನೀವು ಮನೆಯಲ್ಲಿ ದಕ್ಷಿಣಾಭಿಮುಖವಾಗಿರುವ ಶಂಖವನ್ನು ಪೂಜೆ ಮಾಡಬೇಕು. ಶಂಖವನ್ನು ಪೂಜೆ ಮಾಡಿದ್ರೆ ಲಕ್ಷ್ಮಿ ಒಲಿಯುತ್ತಾಳೆ. ಇದ್ರಿಂದ ಸಾಲ ಮುಕ್ತಿ ದೊರೆಯುತ್ತದೆ. ಶಂಖವನ್ನು ನೀವು ನಿಮ್ಮ ಕಚೇರಿಯಲ್ಲಿ ಕೂಡ ಇಡಬಹುದು.
ದುಃಖ, ದಾರಿದ್ರ್ಯವನ್ನು ದೂರ ಮಾಡಲು ಬಯಸಿದ್ರೆ ಪ್ರತಿ ದಿನ ಶಂಖವನ್ನು ಊದಬೇಕು. ಶಂಖದ ಶಬ್ಧ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸುತ್ತದೆ. ರೋಗ ಹರಡುವ ಸೂಕ್ಷ್ಮಿ ಜೀವಿಗಳು ಮನೆಯಿಂದ ದೂರ ಓಡುತ್ತವೆ ಎಂಬ ನಂಬಿಕೆಯಿದೆ.
ಶಂಖದಿಂದ ಆರೋಗ್ಯ ವೃದ್ಧಿಯೂ ಸಾಧ್ಯ. ಶಂಖವನ್ನು ಪ್ರತಿ ದಿನ ಊದಿದ್ರೆ ಶ್ವಾಸಕೋಶದ ಆರೋಗ್ಯ ಸುಧಾರಿಸುತ್ತದೆ. ಹೆಚ್ಚು ವರ್ಷ ಬದುಕಬೇಕು ಎನ್ನುವವರು ಶಂಖ ಊದಬೇಕು. ಇದ್ರಿಂದ ವ್ಯಕ್ತಿ ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆ ಹೆಚ್ಚಾಗುತ್ತದೆ.