alex Certify ಹತ್ಯೆಯಾದ ಅತೀಕ್ ಅಹ್ಮದ್ ಕಚೇರಿಯಲ್ಲಿ ರಕ್ತದ ಕಲೆ ಮತ್ತು ಚಾಕು ಪತ್ತೆ ಬಗ್ಗೆ ಪೊಲೀಸರ ತನಿಖೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹತ್ಯೆಯಾದ ಅತೀಕ್ ಅಹ್ಮದ್ ಕಚೇರಿಯಲ್ಲಿ ರಕ್ತದ ಕಲೆ ಮತ್ತು ಚಾಕು ಪತ್ತೆ ಬಗ್ಗೆ ಪೊಲೀಸರ ತನಿಖೆ

ಹತ್ಯೆಯಾದ ಉತ್ತರಪ್ರದೇಶದ ಗ್ಯಾಂಗ್ ಸ್ಟರ್ ರಾಜಕಾರಣಿ ಅತೀಕ್ ಅಹ್ಮದ್ ಕಚೇರಿಯಲ್ಲಿ ರಕ್ತದ ಕಲೆ ಮತ್ತು ಚಾಕು ಪತ್ತೆಯಾಗಿದೆ.

ಈ ತಿಂಗಳ ಆರಂಭದಲ್ಲಿ ಗುಂಡಿನ ದಾಳಿಯಲ್ಲಿ ಹತ್ಯೆಯಾದ ಪ್ರಯಾಗ್‌ರಾಜ್‌ನಲ್ಲಿರುವ ಗ್ಯಾಂಗ್ ಸ್ಟರ್ ರಾಜಕಾರಣಿ ಅತೀಕ್ ಅಹ್ಮದ್‌ನ ಭಾಗಶಃ ಕೆಡವಲಾದ ಕಚೇರಿಯೊಳಗೆ ರಕ್ತದ ಕಲೆಗಳು, ಚಾಕು ಕಂಡುಬಂದಿದೆ ಎಂದು ಪ್ರಯಾಗ್ ರಾಜ್ ಹೆಚ್ಚುವರಿ ಪೊಲೀಸ್ ಆಯುಕ್ತ (ಎಸಿಪಿ) ಸತ್ಯೇಂದ್ರ ಪ್ರಸಾದ್ ತಿವಾರಿ ಹೇಳಿದ್ದಾರೆ.

ಈ ಬಗ್ಗೆ ಹೆಚ್ಚಿನ ಪರೀಕ್ಷೆಯನ್ನುಎಫ್‌ಎಸ್‌ಎಲ್ ತಂಡ ನಡೆಯಲಿದೆ. ಸಿಸಿ ಕ್ಯಾಮೆರಾ ದೃಶ್ಯಗಳನ್ನು ಸಹ ಪರಿಶೀಲಿಸಲಾಗುತ್ತದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಇದರೊಂದಿಗೆ ಉತ್ತರ ಪ್ರದೇಶ ಸರ್ಕಾರವು ಅತಿಕ್ ಅಹ್ಮದ್ ಅವರ ಪುತ್ರ ಅಸದ್ ನನ್ನು ರಾಜ್ಯದಲ್ಲಿ ಎನ್‌ಕೌಂಟರ್‌ನಲ್ಲಿ ಕೊಂದ ಪ್ರಕರಣದ ತನಿಖೆಗಾಗಿ ಇಬ್ಬರು ಸದಸ್ಯರ ನ್ಯಾಯಾಂಗ ಆಯೋಗವನ್ನು ರಚಿಸಿದೆ.

ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅಸದ್ ತನ್ನ ಸಹಾಯಕ ಗುಲಾಮ್ ಜೊತೆಗೆ ಏಪ್ರಿಲ್ 13 ರಂದು ಝಾನ್ಸಿಯಲ್ಲಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಯ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟನು.

ಈ ಸಮಿತಿಯ ನೇತೃತ್ವವನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಾಜೀವ್ ಲೋಚನ್ ಮೆಹ್ರೋತ್ರಾ ಮತ್ತು ನಿವೃತ್ತ ಡಿ ಜಿ ವಿಜಯ್ ಕುಮಾರ್ ಗುಪ್ತಾ ವಹಿಸಲಿದ್ದಾರೆ.

ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು ಏಪ್ರಿಲ್ 15 ರಂದು ರಾತ್ರಿ ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದಾಗ ಮಾಧ್ಯಮ ಪ್ರತಿನಿಧಿಗಳಂತೆ ಬಂದ ಮೂವರು ಗುಂಡಿಕ್ಕಿ ಕೊಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...