ಶಿವಮೊಗ್ಗ: ಒಂದೇ ಕುಟುಂಬದ 9 ಜನರು ರಕ್ತ ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾದ ಘಟನೆ ಶಿವಮೊಗ ಜಿಲ್ಲೆ ಹೊಸನಗರದಲ್ಲಿ ನಡೆದಿದೆ.
ನಿರಗಂಟಿ ತುಕಾರಾಮ ಸ್ಮರಣಾರ್ಥವಾಗಿ ಹೊಸನಗರ ಪೊಲೀಸ್ ಠಾಣೆ ಹಾಗೂ ಮೆಗ್ಗಾನ್ ಆಸ್ಪತ್ರೆ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಹೊಸನಗರದ ಗದ್ದೆಮನೆ ನಿವಾಸಿ ಮೊಯಿದ್ದೀನ್ ಸಾಬ್ ಎಂಬುವವರ ಕುಟುಂಬದ ಒಟ್ಟು 9 ಜನರು ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು.
ಇದೇ ವೇಳೆ ಇಬ್ಬರು ಪ್ರವಾಸಿಗರು ಕೂಡ ರಕ್ತದಾನ ಮಾಡಿ ಜಾಗೃತಿ ಮೂಡಿಸಿದರು. ಹೊಸನಗರದಲ್ಲಿ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ 120 ಯೂನಿಟ್ ರಕ್ತ ಸಂಗ್ರಹ ಮಾಡಲಾಗಿದ್ದು,ಹೊಸನಗರ ತಾಲೂಕಿನಲ್ಲಿ ಈವರೆಗಿನ ಗರಿಷ್ಠ ಸಾಧನೆಯಾಗಿದೆ ಎಂದು ತಿಳಿದುಬಂದಿದೆ.