ಭಾರತದಲ್ಲಿ ದ್ವಿಚಕ್ರ ವಾಹನಗಳಿಗೆ ಭಾರಿ ಬೇಡಿಕೆಯಿದೆ. ದ್ವಿಚಕ್ರ ವಾಹನ ಕೊಳ್ಳುವ ಕನಸನ್ನು ನನಸು ಮಾಡಿಕೊಳ್ಳಲು ಇದು ಸಕಾಲ. ಸದ್ಯ ದ್ವಿಚಕ್ರ ವಾಹನಗಳ ಮಾರಾಟ ಕೂಡ ಜೋರಾಗಿದೆ. ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಾದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಭರ್ಜರಿ ಸೇಲ್ಸ್ ನಡೆಯುತ್ತಿದೆ. ಬೈಕ್‌ಗಳನ್ನು ನೋ ಕಾಸ್ಟ್ ಇಎಂಐನಲ್ಲಿ ಮಾರಾಟ ಮಾಡಲಾಗ್ತಿದೆ.
ಈ ಆಫರ್ ಸೀಮಿತ ಅವಧಿಗೆ Amazon ಮತ್ತು Flipkart ನಲ್ಲಿ ಲಭ್ಯವಿದೆ. Amazon ನಲ್ಲಿ ಈ ಮಾರಾಟವು ಜುಲೈ 20 ಮತ್ತು ಜುಲೈ 21ರ ನಡುವೆ ಇರುತ್ತದೆ. Flipkart ನಲ್ಲಿ ಈ ಮಾರಾಟವು ಜುಲೈ 20 ರಿಂದಲೇ ಪ್ರಾರಂಭವಾಗಿದ್ದು, ಜುಲೈ 25ರವರೆಗೆ ಮುಂದುವರಿಯುತ್ತದೆ.
ವಿದಾ : Vida V1 Plus ಸ್ಕೂಟರ್ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಾದ Amazon ಮತ್ತು Flipkart ಎರಡರಲ್ಲೂ ಲಭ್ಯವಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಕೂಟರ್‌ನ ಬೆಲೆ 1,19,900 ರೂ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು Amazon ನಲ್ಲಿ 1,01,150 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದನ್ನು Flipkart ನಲ್ಲಿ ತಿಂಗಳಿಗೆ 9,992 ರೂಪಾಯಿಗಳ EMI ನಲ್ಲಿ ಖರೀದಿಸಿದರೆ ಯಾವುದೇ ಪ್ರತ್ಯೇಕ ಪಾವತಿಯನ್ನು ಮಾಡಬೇಕಾಗಿಲ್ಲ. Vida V1 Pro ಫ್ಲಿಪ್‌ಕಾರ್ಟ್‌ನಲ್ಲಿ 1,49,900 ರೂ.ಗೆ ಲಭ್ಯವಿದೆ. ಈ ಸ್ಕೂಟರ್ ಬೆಲೆ ಅಮೆಜಾನ್‌ನಲ್ಲಿ 1,16,150 ರೂಪಾಯಿ.
ಬಜಾಜ್ ಆಟೋ : Amazon ನಲ್ಲಿ Bajaj Chetak 2901 ಬೆಲೆಯನ್ನು 82,435 ರೂಪಾಯಿಗೆ ನಿಗದಿಪಡಿಸಲಾಗಿದೆ. ಆದರೆ ಬಜಾಜ್ ಚೇತಕ್ ಅರ್ಬೇನ್ ಇವಿ ಬೆಲೆ 98,965 ರೂಪಾಯಿ ಇದೆ. ಬಜಾಜ್ ಚೇತಕ್ ಪ್ರೀಮಿಯಂ ಬೆಲೆಯನ್ನು 1,20,720 ರೂಪಾಯಿಗೆ ನಿಗದಿಪಡಿಸಲಾಗಿದೆ.
ಅಮೆಜಾನ್ ಮಾತ್ರವಲ್ಲದೆ ಬಜಾಜ್ ಮಾದರಿಗಳು ಫ್ಲಿಪ್‌ಕಾರ್ಟ್‌ನಲ್ಲಿಯೂ ಲಭ್ಯವಿದೆ. ಬಜಾಜ್ ಪಲ್ಸರ್ 125 ಅನ್ನು ನೋ ಕಾಸ್ಟ್ EMIನಲ್ಲಿ ಮಾರಾಟ ಮಾಡಲಾಗ್ತಿದೆ. ಈ ಬೈಕಿನ ಬೆಲೆ 93,875 ರೂಪಾಯಿ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಎರಡರಲ್ಲೂ ಈ ಬಜಾಜ್‌ನ ಹೆಚ್ಚಿನ ಮಾದರಿಗಳು ಈ ಸೇಲ್ಸ್‌ನಲ್ಲಿ ಲಭ್ಯವಿವೆ.
ಹೀರೋ : ಹೀರೋ ಸೂಪರ್ ಸ್ಪ್ಲೆಂಡರ್ (ಡಿಸ್ಕ್) ಫ್ಲಿಪ್‌ಕಾರ್ಟ್‌ನಲ್ಲಿ 86,048 ರೂಪಾಯಿಗೆ ಲಭ್ಯವಿದೆ. ಇದರೊಂದಿಗೆ ಹೀರೋ ಗ್ಲಾಮರ್ XTEC (ಡ್ರಮ್) ಅನ್ನು 89,198 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಈ ಎರಡೂ ಬೈಕುಗಳನ್ನು ನೋ ಕಾಸ್ಟ್ EMI ನಲ್ಲಿ ಮಾರಾಟ ಮಾಡಲಾಗ್ತಿದೆ.