
ಝೊಮೆಟೋ ಮಾಲೀಕತ್ವದ ಬ್ಲಿಂಕಿಟ್ ಗುರುಗ್ರಾಮ್ನಲ್ಲಿ ಪ್ರಿಂಟ್ ಔಟ್ ಡೆಲಿವರಿ ಸೇವೆಯನ್ನು ಪ್ರಾರಂಭಿಸಿದೆ. ಬ್ಲಾಕ್ ಅಂಡ್ ವೈಟ್ ಪ್ರಿಂಟ್ ಔಟ್ ಗಳಿಗೆ ಪ್ರತಿ ಪುಟಕ್ಕೆ ರೂ. 9 ಮತ್ತು ಕಲರ್ ಪ್ರಿಂಟ್ ಔಟ್ಗಳಿಗೆ ಪ್ರತಿ ಪುಟಕ್ಕೆ ರೂ. 19 ವಿಧಿಸಲು ನಿರ್ಧರಿಸಿದೆ.
ಪ್ರತಿ ಪ್ರಿಂಟ್ಔಟ್ ಆರ್ಡರ್ಗೆ ವಿತರಣಾ ಶುಲ್ಕವಾಗಿ ಹೆಚ್ಚುವರಿ 25 ರೂ.ಗಳನ್ನು ವಿಧಿಸಲಾಗುತ್ತದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಗುರುಗ್ರಾಮದ ಕೆಲವು ಸ್ಥಳಗಳಲ್ಲಿ ಸೇವೆಯನ್ನು ಪ್ರಾರಂಭಿಸಲಾಗಿದೆಯಾದರೂ, ಗ್ರಾಹಕರು ಸೇವೆಯು ಉಪಯುಕ್ತವೆಂದು ಕಂಡುಕೊಂಡರೆ ಅದು ಹೆಚ್ಚಿನ ಸ್ಥಳಗಳಿಗೆ ವಿಸ್ತರಣೆಗೊಳ್ಳುತ್ತದೆ.
ಆದರೆ, ಅನೇಕ ಟ್ವಿಟ್ಟರ್ ಬಳಕೆದಾರರು ಸೇವೆಯ ಕುರಿತು ಬ್ಲಿಂಕಿಟ್ ಅನ್ನು ಕೆಣಕಿದ್ದಾರೆ, ಹೆಚ್ಚಿನ ಸ್ಥಳೀಯ ಫೋಟೊಕಾಪಿ ಅಂಗಡಿಗಳು ಪ್ರಿಂಟ್ಔಟ್ಗಳಿಗೆ ಕಡಿಮೆ ಶುಲ್ಕ ವಿಧಿಸುವುದರಿಂದ ಇದು ಅವರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ, ಬ್ಲಿಂಕಿಟ್ ಸೇವೆಯ ಗುರಿ ಗ್ರಾಹಕರು, ಪಾಸ್ಪೋರ್ಟ್, ವೀಸಾಗಳು, ಬಾಡಿಗೆ ಒಪ್ಪಂದಗಳ ಅಗತ್ಯವಿರುವವರು ಸೇರಿ ಶೈಕ್ಷಣಿಕ ಮುದ್ರಣ ಅವಶ್ಯಕತೆಗಳಿಗಾಗಿ ವಿದ್ಯಾರ್ಥಿಗಳನ್ನು ಗುರಿಯಾಗಿಸುತ್ತದೆ. ಭವಿಷ್ಯದಲ್ಲಿ, ಬ್ಲಿಂಕಿಟ್ ತನ್ನ ಕ್ಲೈಂಟ್ ಬೇಸ್ ಗುರಿಯನ್ನು ವಿಸ್ತರಿಸಬಹುದು.