ಫೆಬ್ರವರಿ 14 ರಂದು ನಡೆದ ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಕಾಂಡೋಮ್ ಹಾಗೂ ಕ್ಯಾಂಡಲ್ ಮಾರಾಟದಲ್ಲಿ ಭಾರಿ ಏರಿಕೆಯಾಗಿದೆ. ಈ ವಿಚಾರವನ್ನು ಬ್ಲಿಂಕಿಟ್ ಸಂಸ್ಥಾಪಕ ಅಲ್ಬಿಂದರ್ ದಿಂಡ್ಸಾ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಹಂಚಿಕೊಂಡಿದ್ದು, ಪ್ರೇಮಿಗಳ ದಿನಕ್ಕೂ ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದರೆ ಅಂದು ಇವುಗಳ ಮಾರಾಟ ಹೆಚ್ಚಿತ್ತು ಎಂದು ತಿಳಿಸಿದ್ದಾರೆ.
ಇದರ ಜೊತೆಗೆ ಪುರುಷರ ಡಿಒಡರೆಂಟ್, ಮಹಿಳೆಯರ ಪರ್ಫ್ಯೂಮ್, ಬೊಕ್ಕೆ, ಚಾಕೊಲೇಟ್ ಮಾರಾಟವೂ ಹೆಚ್ಚಾಗಿತ್ತು ಎಂದು ಹೇಳಿರುವ ಅಲ್ಬಿಂದರ್ ದಿಂಡ್ಸಾ ‘ಡಿಒಡರೆಂಟ್, ಪರ್ಫ್ಯೂಮ್ ಖರೀದಿ ನೋಡಿದರೆ ಪ್ರೀತಿ ಗಾಳಿಯಲ್ಲಿತ್ತೆಂದು ಕಾಣಿಸುತ್ತೆ’ ಎಂದು ತಮಾಷೆ ಮಾಡಿದ್ದಾರೆ.
ಮಂಗಳವಾರ ಮಧ್ಯಾಹ್ನ 2 ಗಂಟೆಯವರೆಗೆ ಶೇಕಡ 30ರಷ್ಟು ಆರ್ಡರ್ ಗಳನ್ನು ಇತರೆಯವರಿಗಾಗಿ ಮಾಡಿದ್ದು, 3-15ರ ಬಳಿಕ ಕಂಪನಿ ಅತಿ ಹೆಚ್ಚಿನ ಚಾಕಲೇಟ್ ಗಳನ್ನು ಮಾರಾಟ ಮಾಡಿತು ಎಂದು ತಿಳಿಸಿದ್ದಾರೆ.
ಬ್ಲಿಂಕ್ ಇಟ್ ಪ್ರೇಮಿಗಳ ದಿನದಂದು ಬೆಳಿಗ್ಗೆ 10 ಗಂಟೆ ಒಳಗಾಗಿ 10,000 ಸಿಂಗಲ್ ಗುಲಾಬಿ, 1,300 ಬಕ್ಕೆಗಳನ್ನು ಡೆಲಿವರಿ ಮಾಡಿದೆ ಎಂದು ಅಲ್ಬಿಂದರ್ ದಿಂಡ್ಸಾ ತಿಳಿಸಿದ್ದಾರೆ.