
ಶ್ರೀನಿಧಿ ಬೆಂಗಳೂರು ನಿರ್ದೇಶನದ ದೀಕ್ಷಿತ್ ಶೆಟ್ಟಿ ಅಭಿನಯದ ಬ್ಲಿಂಕ್ ಚಿತ್ರ ಅಂದುಕೊಂಡಂತೆ ಸೂಪರ್ ಡೂಪರ್ ಹಿಟ್ ಆಗಿತ್ತು ಇದೀಗ 50 ದಿನಗಳನ್ನು ಪೂರೈಸುವ ಮೂಲಕ ತನ್ನ ನಾಗಲೋಟವನ್ನು ಮುಂದುವರಿಸಿದೆ ಈ ಸಂತಸವನ್ನು ನಟಿ ಚೈತ್ರ ಆಚಾರ್, ತಮ್ಮ instagram ನಲ್ಲಿ ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಚಿತ್ರವನ್ನು ಜನನಿ ಪಿಚ್ಚರ್ಸ್ ಬ್ಯಾನರ್ ನಲ್ಲಿ ರವಿಚಂದ್ರ ಎಜೆ ನಿರ್ಮಾಣ ಮಾಡಿದ್ದು, ದೀಕ್ಷಿತ್ ಶೆಟ್ಟಿ ಮತ್ತು ಚೈತ್ರ ಆಚಾರ್ ಪ್ರಮುಖ ಪಾತ್ರದಲ್ಲಿದ್ದಾರೆ. ಮಂದಾರ ಭಟ್ಟಲಹಳ್ಳಿ, ವಿಶಾಲ್ ಜೈವಿಕ್, ಗೋಪಾಲ್ ದೇಶಪಾಂಡೆ, ಸುರೇಶ್ ಅನಗಳ್ಳಿ, ಮತ್ತು ಕಿರಣ್ ನಾಯಕ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಪ್ರಸನ್ನ ಕುಮಾರ್ ಸಂಗೀತ ಸಂಯೋಜನೆ ನೀಡಿದ್ದು, ಸಂಜೀವ್ ಜಗಿರ್ದಾರ್ ಸಂಕಲನವಿದೆ.
