
ಬಾಲಿವುಡ್ ನಟ ಸೋನುಸೂದ್ ಯಾರಿಗೆ ಗೊತ್ತಿಲ್ಲ ಹೇಳಿ. ದಕ್ಷಿಣ ಭಾರತದ ಸಿನೆಮಾಗಳಲ್ಲೂ ನಟಿಸಿ ಸೂಪರ್ ಹಿಟ್ ಸಿನೆಮಾಗಳನ್ನ ಕೊಟ್ಟ ನಟ. ಅದಕ್ಕಿಂತ ಹೆಚ್ಚಾಗಿ ಲಾಕ್‌ಡೌನ್ ಸಮಯದಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಅನೇಕ ನಿರ್ಗತಿಕರಿಗೆ ಸಹಾಯ ಮಾಡಿ ಜನರಿಗೆ ಹತ್ತಿರವಾಗಿದ್ದ ವ್ಯಕ್ತಿ. ಅದೆಷ್ಟೋ ಜನರ ಪಾಲಿಗೆ ಸೋನುಸೂದ್ ದೇವರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದೇ ಸೋನುಸೂದ್ ಅಭಿಮಾನಿಯೊಬ್ಬರು ಮಾಡಿದ ಕೆಲಸ ಎಂಥವರೂ ಕೂಡಾ ಅಚ್ಚರಿ ಪಡುವ ಹಾಗಿದೆ.
ಸೋನುಸೂದ್‌ನ ಈ ಪಕ್ಕಾ ಅಭಿಮಾನಿ ಹೆಸರು ಅಜಮೇರ್ ಆಲಂ, ಈತ ನೂರಾರು ಜನರ ಮುಂದೆ ಮಾಡಿರೋ ಆ ಒಂದು ಕೆಲಸ ಎಲ್ಲರೂ ಹುಬ್ಬೇರಿಸಿ ನೋಡುವಂತೆ ಮಾಡಿತ್ತು. ಅಸಲಿಗೆ ಅಜಮೇರ್ ಕಣ್ಣಿಗೆ ಉಪ್ಪು ಹಾಕಿಕೊಂಡು, ಅದಕ್ಕೆ ಬಟ್ಟೆಕಟ್ಟಿಕೊಂಡು. ಆ ನಂತರ ಅಲ್ಲೇ ಇದ್ದ ಪೇಂಟಿಂಗ್ ಬೋರ್ಡ್ ಬಳಿಗೆ ಹೋಗಿ ಸೋನುಸೂದ್ ಭಾವಚಿತ್ರವನ್ನ ಬಿಡಿಸುತ್ತಾನೆ. ಇನ್ನೂ ಒಂದು ಶಾಕಿಂಗ್ ವಿಚಾರ ಏನಂದ್ರೆ ಆ ಚಿತ್ರವನ್ನ ಆತ ಉಲ್ಟಾ ಬಿಡಿಸಿದ್ದ.
ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಆಗಿರೋ ಈ ವಿಡಿಯೋ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ವಿಭಿನ್ನವಾಗಿ ಬಿಡಿಸಿದ್ದ ಈ ಚಿತ್ರವನ್ನ ನೋಡಿ ಮೆಚ್ಚುಗೆಯ ಮಹಾಪೂರವೇ ಹರಿದು ಬರ್ತಿದೆ. ಕಣ್ಣು ಮುಚ್ಚಿಕೊಂಡು ಪೇಂಟಿಂಗ್ ಬಿಡಿಸುವುದೇ ದೊಡ್ಡ ಕೆಲಸ, ಅದರಲ್ಲೂ ಕಣ್ಣಿಗೆ ಉಪ್ಪು ಹಾಕಿಕೊಂಡು, ಅದಕ್ಕೆ ಬಟ್ಟೆ ಕಟ್ಟಿಕೊಂಡು ಇಂಥಾ ಪೇಂಟಿಂಗ್ ಬಿಡಿಸಿರೋದು ನಿಜಕ್ಕೂ ಅದ್ಭುತ. ಈ ಪೇಂಟಿಂಗ್ ವಿಡಿಯೋವನ್ನ ವಿಕಾಸ್ ಕುಮಾರ್ ಗುಪ್ತಾ ಅವರು ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಹಾಕಿಕೊಂಡು, ಈ ಪೇಂಟಿಂಗ್ ಸೋನುಸೂದ್‌ಗೆ ಕೊಡಬೇಕು ಅನ್ನೋದು ಅಜಮೇರ್ ಆಸೆ ಅಂತ ಬರೆದುಕೊಂಡಿದ್ದಾರೆ. ಈ ಆಸೆ ಆದಷ್ಟು ಬೇಗ ಈಡೇರಲಿ ಅನ್ನೋದೇ ಎಲ್ಲರ ಆಶಯವಾಗಿದೆ.
https://twitter.com/nirav_ec/status/1536647931771731969?ref_src=twsrc%5Etfw%7Ctwcamp%5Etweetembed%7Ctwterm%5E1536647931771731969%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fblindfolded-man-makes-sonu-sood-s-portrait-in-viral-video-actor-reacts-1963686-2022-06-17