alex Certify ಒಂಟಿ ಒಂಟಿಯಾಗಿರುವುದು ಬೋರೋ ಬೋರೋ ಎನ್ನಬೇಕಾಗಿಲ್ಲ….! ಬಾಟಲಿ ಮೂಲಕ ಸಿಗಲಿದ್ದಾರೆ ಸಂಗಾತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂಟಿ ಒಂಟಿಯಾಗಿರುವುದು ಬೋರೋ ಬೋರೋ ಎನ್ನಬೇಕಾಗಿಲ್ಲ….! ಬಾಟಲಿ ಮೂಲಕ ಸಿಗಲಿದ್ದಾರೆ ಸಂಗಾತಿ

ಒಂಟಿಯಾಗಿರುವುದು ಬಹುತೇಕರಿಗೆ ಬೇಸರದ ವಿಷ್ಯ. ಹದಿಹರೆಯಕ್ಕೆ ಬರ್ತಿದ್ದಂತೆ ಗೆಳೆಯ, ಗೆಳತಿಯ ಹುಡುಕಾಟ ಶುರುವಾಗುತ್ತದೆ. ಒಬ್ಬಂಟಿಯಾಗಿರುವವರಿಗೆ ಮಾರುಕಟ್ಟೆಯಲ್ಲಿ ಅನೇಕ ಡೇಟಿಂಗ್ ಸೈಟ್‌ಗಳು ಲಭ್ಯವಿದೆ. ಈ ವೆಬ್‌ಸೈಟ್‌ಗಳ ಮೂಲಕ ಜನರು ಪರಿಚಯವಾಗ್ತಾರೆ. ನಂತ್ರ ಹತ್ತಿರವಾಗಿ, ದಾಂಪತ್ಯ ಜೀವನಕ್ಕೆ ಕಾಲಿಡುವವರಿದ್ದಾರೆ. ಆದ್ರೆ ಡೇಟಿಂಗ್ ಅಪ್ಲಿಕೇಷನ್ ಮೂಲಕ, ಸಂಗಾತಿ ಹುಡುಕುವುದು ಸುಲಭವಲ್ಲ.

ಚೀನಾದ ಸಿಚುವಾನ್ ಪ್ರಾಂತ್ಯದ ಚೆಂಗ್ಡು ನಗರದಲ್ಲಿ ಈ ಸಮಸ್ಯೆಯಿಂದ ಮುಕ್ತಿ ಪಡೆಯುವ ವಿಶಿಷ್ಟ ಮಾರ್ಗ ಕಂಡು ಹಿಡಿಯಲಾಗಿದೆ. ನಗರದಲ್ಲಿ ಯಾರೂ ಒಂಟಿಯಾಗಿರಬಾರದು ಎನ್ನುವ ಕಾರಣಕ್ಕೆ ಅಂಗಡಿ ತೆರೆಯಲಾಗಿದೆ. ಅಂಗಡಿಗೆ ‘ಸ್ಟಾಪ್ ಬಿಯಿಂಗ್ ಸಿಂಗಲ್’ ಎಂದೇ ನಾಮಕರಣ ಮಾಡಲಾಗಿದೆ.

ಈ ಬ್ಯಾಂಕ್ ನಲ್ಲಿ ಖಾತೆ ತೆರೆದ್ರೆ ಗ್ರಾಹಕರಿಗೆ ಸಿಗಲಿದೆ 20 ಲಕ್ಷ ರೂ. ವರೆಗೆ ಲಾಭ

ಒಬ್ಬಂಟಿಗರಿಗೆ ಇಲ್ಲಿ ವಿಭಿನ್ನ ವ್ಯವಸ್ಥೆಗಳನ್ನು ಮಾಡಲಾಗಿದೆ. ಅಂಗಡಿಗೆ ಬಂದು, ಜನರು ಸಂಗಾತಿ ಹುಡುಕಾಟ ನಡೆಸಬಹುದು. ಬಾಟಲಿಗಳನ್ನು ಅಂಗಡಿಯಲ್ಲಿ ಇಡಲಾಗಿದೆ. ಅದರಲ್ಲಿ ಪ್ರೀತಿಯನ್ನು ಹುಡುಕುತ್ತಿರುವ ವ್ಯಕ್ತಿಗಳ ವೈಯಕ್ತಿಕ ವಿವರವಿದೆ. ಈ ಬಾಟಲಿಗಳನ್ನು ಬ್ಲೈಂಡ್ ಬಾಕ್ಸ್ ಎಂದೂ ಕರೆಯುತ್ತಾರೆ. ಈ ಬಾಟಲಿಗಳನ್ನು ತೆರೆಯುವ ಮೂಲಕ, ಆ ವ್ಯಕ್ತಿಯ ಸಂಪೂರ್ಣ ವಿವರ ಪಡೆಯಬಹುದು. ಆಕರ್ಷಕವೆನ್ನಿಸಿದ್ರೆ ಮುಂದೆ ಹೆಜ್ಜೆಯಿಡಬಹುದು. ಅಂಗಡಿಯಲ್ಲಿ ಲಭ್ಯವಿರುವ ಈ ಸೇವೆಯು ತುಂಬಾ ಅಗ್ಗವಾಗಿದೆ.

ಇದಕ್ಕಾಗಿ ಗ್ರಾಹಕರು ಕೇವಲ 350 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಶುಲ್ಕವನ್ನು ಪಾವತಿಸುವ ಮೂಲಕ ವಿವರಗಳನ್ನು ಪಡೆಯಬೇಕಾಗುತ್ತದೆ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹೆಚ್ಚಿನ ಹಣ ಪಾವತಿ ಮಾಡಬೇಕಾಗುತ್ತದೆ.

ಆದ್ರೆ ಚೀನಾ ಅಂಗಡಿಯ ಈ ಮಾದರಿ ಅನೇಕರಿಗೆ ಇಷ್ಟವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಯಾಗ್ತಿದೆ. ವೈಯಕ್ತಿಕ ಮಾಹಿತಿ ತಪ್ಪು ಕೆಲಸಕ್ಕೆ ಕಾರಣವಾಗಬಹುದು ಎಂಬ ಮಾತುಗಳು ಕೇಳಿ ಬರ್ತಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...