alex Certify ಪ್ರಾಣಕ್ಕೇ ಕುತ್ತು ತರಬಹುದು ಲೈಂಗಿಕ ಸಂಭೋಗದ ಸಮಯದಲ್ಲಿ ರಕ್ತಸ್ರಾವ; ಗುಜರಾತ್‌ನಲ್ಲಿ ವಿದ್ಯಾರ್ಥಿನಿ ಬಲಿ..…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಣಕ್ಕೇ ಕುತ್ತು ತರಬಹುದು ಲೈಂಗಿಕ ಸಂಭೋಗದ ಸಮಯದಲ್ಲಿ ರಕ್ತಸ್ರಾವ; ಗುಜರಾತ್‌ನಲ್ಲಿ ವಿದ್ಯಾರ್ಥಿನಿ ಬಲಿ..…!

ಸುರಕ್ಷಿತ ಲೈಂಗಿಕ ಸಂಬಂಧದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು. ಇಲ್ಲದೇ ಹೋದಲ್ಲಿ ಅಪಾಯ ಖಚಿತ. ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ಲೈಂಗಿಕ ಸಂಭೋಗದ ಸಮಯದಲ್ಲಿ ಅತಿಯಾದ ರಕ್ತಸ್ರಾವದಿಂದ ನರ್ಸಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ವಿದ್ಯಾರ್ಥಿನಿ ರಕ್ತಸ್ರಾವದಿಂದ ಒದ್ದಾಡುತ್ತಿದ್ದರೂ ಆಕೆಯ 26 ವರ್ಷದ ಗೆಳೆಯ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ಬದಲು ಗಂಟೆಗಟ್ಟಲೆ ತನ್ನ ಫೋನ್‌ನಲ್ಲಿ ಮನೆಮದ್ದುಗಳನ್ನು ಹುಡುಕುತ್ತಿದ್ದ.

ಆರೋಪಿ ಯುವಕ ಇಂಟರ್‌ನೆಟ್‌ನಲ್ಲಿ ‘ಸೆಕ್ಸ್‌ ವೇಳೆ ರಕ್ತಸ್ರಾವ ತಡೆಯುವ ಮಾರ್ಗಗಳನ್ನು’ ಹುಡುಕುವಲ್ಲಿ ಸಾಕಷ್ಟು ಸಮಯವನ್ನು ವ್ಯರ್ಥ ಮಾಡಿದ್ದಾನೆ. ನಂತರ ತನ್ನ ಸ್ನೇಹಿತರನ್ನು ಸಂಪರ್ಕಿಸಿ, ಸಂತ್ರಸ್ತೆಯನ್ನು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಅಷ್ಟರಲ್ಲಾಗಲೇ ಪರಿಸ್ಥಿತಿ ಕೈಮೀರಿತ್ತು, ಯುವತಿ ದುರ್ಮರಣಕ್ಕೀಡಾಗಿದ್ದಾಳೆ ಫೋರೆನ್ಸಿಕ್ ವರದಿಯ ಪ್ರಕಾರ ಅತಿಯಾದ ರಕ್ತಸ್ರಾವದಿಂದ ವಿದ್ಯಾರ್ಥಿನಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಸಕಾಲದಲ್ಲಿ ತುರ್ತು ವೈದ್ಯಕೀಯ ನೆರವು ಪಡೆದಿದ್ದರೆ ಆಕೆಯ ಜೀವ ಉಳಿಸಬಹುದಿತ್ತು.

ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ವಿದ್ಯಾರ್ಥಿನಿಯ ಖಾಸಗಿ ಭಾಗಗಳಲ್ಲಿ ಗಂಭೀರವಾದ ಗಾಯಗಳಾಗಿದ್ದು, ಅತಿಯಾದ ರಕ್ತಸ್ರಾವಕ್ಕೆ ಕಾರಣವಾಯ್ತು. ಅಂತಿಮವಾಗಿ ಹೆಮರಾಜಿಕ್ ಆಘಾತದಿಂದ ಅವಳು ಸಾವನ್ನಪ್ಪಿದ್ದಾಳೆ. ದೈಹಿಕ ಸಂಬಂಧದ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿದರೂ ಯುವಕ ಸಂಭೋಗವನ್ನು ಮುಂದುವರಿಸಿದ್ದ. ಪರಿಸ್ಥಿತಿ ಬಿಗಡಾಯಿಸಿದರೂ ಸುಮಾರು 60 ರಿಂದ 90 ನಿಮಿಷಗಳ ಕಾಲ ಅವರು ಹೋಟೆಲ್‌ನಲ್ಲೇ ಕಳೆದ ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಳು.

ಲೈಂಗಿಕ ಸಂಭೋಗದ ಸಮಯದಲ್ಲಿ ರಕ್ತಸ್ರಾವ ಏಕೆ ಸಂಭವಿಸುತ್ತದೆ?

ಸಂಭೋಗದ ಸಮಯದಲ್ಲಿ ರಕ್ತಸ್ರಾವವು ಹಲವಾರು ಕಾರಣಗಳಿಗಾಗಿ ಸಂಭವಿಸಬಹುದು, ಅವುಗಳೆಂದರೆ:

* ಸೋಂಕು: ಯೋನಿ ಸೋಂಕು ಇದ್ದರೆ ದೈಹಿಕ ಸಂಪರ್ಕದ ಸಮಯದಲ್ಲಿ ರಕ್ತಸ್ರಾವ ಸಂಭವಿಸಬಹುದು.

* ಗಾಯ: ದೈಹಿಕ ಮಿಲನದ ವೇಳೆ ಯಾವುದೇ ಗಾಯ ಉಂಟಾದರೆ ರಕ್ತಸ್ರಾವವಾಗಬಹುದು.

* ಹಾರ್ಮೋನ್ ಅಸಮತೋಲನ: ಹಾರ್ಮೋನ್ ಅಸಮತೋಲನವೂ ರಕ್ತಸ್ರಾವಕ್ಕೆ ಕಾರಣವಾಗಬಹುದು.

* ಇತರ ಆರೋಗ್ಯ ಸಮಸ್ಯೆಗಳು: ಗರ್ಭಾಶಯದ ಕ್ಯಾನ್ಸರ್, ಪಾಲಿಪ್ಸ್ ಅಥವಾ ಫೈಬ್ರಾಯ್ಡ್‌ಗಳಂತಹ ಇತರ ಆರೋಗ್ಯ ಸಮಸ್ಯೆಗಳು ಸಹ ರಕ್ತಸ್ರಾವಕ್ಕೆ ಕಾರಣವಾಗಬಹುದು.

ರಕ್ತಸ್ರಾವವಾದಾಗ ಏನು ಮಾಡಬೇಕು?

ಲೈಂಗಿಕ ಸಂಭೋಗದ ಸಮಯದಲ್ಲಿ ರಕ್ತಸ್ರಾವ ಸಂಭವಿಸಿದಲ್ಲಿ  ಗಾಬರಿಯಾಗಬೇಡಿ, ತಕ್ಷಣ ದೈಹಿಕ ಸಂಬಂಧ ನಿಲ್ಲಿಸಿ. ಸಾಧ್ಯವಾದಷ್ಟು ಬೇಗ ವೈದ್ಯರನ್ನು ಅಥವಾ ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿ. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧ ಸೇವಿಸಬೇಡಿ. ವಿಶ್ರಾಂತಿ ಪಡೆಯಿರಿ ಮತ್ತು ಸಾಕಷ್ಟು ನೀರು ಕುಡಿಯಿರಿ. ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವ ಜೊತೆಗೆ ಸೋಂಕು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಿ.

ದೈಹಿಕ ಸಂಭೋಗದ ಸಮಯದಲ್ಲಿ ಸಂಭವಿಸುವ ರಕ್ತಸ್ರಾವವು ಸಾವಿಗೂ ಕಾರಣವಾಗಬಹುದು. ಇದನ್ನು ನಿರ್ಲಕ್ಷಿಸಬಾರದು. ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...