ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಶುಕ್ರವಾರದಂದು ಪ್ರಾರ್ಥನೆ ಸಲ್ಲಿಸುತ್ತಿದ್ದ 50ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಪಶ್ಚಿಮ ಕಾಬೂಲ್ ನ ಖಲೀಫಾ ಸಾಹೀಬ್ ಮಸೀದಿಯಲ್ಲಿ ಈ ಒಂದು ದುರ್ಘಟನೆ ನಡೆದಿದೆ.
ಶುಕ್ರವಾರವಾದ ಕಾರಣ ಮಸೀದಿಯಲ್ಲಿ ನೂರಾರು ಮಂದಿ ಪ್ರಾರ್ಥನೆಗಾಗಿ ಸೇರಿದ್ದು, ಸುನ್ನಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಈ ಬಾಂಬ್ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಪ್ರಾರ್ಥನೆ ಸಲ್ಲಿಸಲು ತಾನೂ ಒಬ್ಬನಾಗಿ ಬಂದ ದಾಳಿಕೋರ ಬಳಿಕ ಸ್ಫೋಟಿಸಿಕೊಂಡಿದ್ದಾನೆ.
SHOCKING NEWS: ಇಂಟಲಿಜೆನ್ಸ್ DYSP ಶಿವಕುಮಾರ್ ಹೃದಯಾಘಾತದಿಂದ ಸಾವು
ಸ್ಫೋಟದ ಬಳಿಕ ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿದ್ದು, ಗಾಯಾಳುಗಳು ನರಳುತ್ತ ಬಿದ್ದಿದ್ದರು. ಅವರುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಗಾಯಾಳುಗಳ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.