ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ನಲ್ಲಿರುವ ಸರ್ದಾರ್ ಮೊಹಮ್ಮದ್ ದೌದ್ ಖಾನ್ ಮಿಲಿಟರಿ ಆಸ್ಪತ್ರೆ ಸಮೀಪ ಗುಂಡಿನ ಸದ್ದು ಕೇಳಿ ಬಂದಿದೆ ಹಾಗೂ ಕನಿಷ್ಟ ಎರಡು ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸ್ಫೋಟ ನಡೆದ ಸ್ಥಳದ ಬಳಿ ವಾಸವಿದ್ದ ನಿವಾಸಿಗಳು ದಟ್ಟ ಹೊಗೆಯಿಂದ ಆವೃತವಾದ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.
ಈ ಸ್ಫೋಟದ ಸಂಬಂಧ ತಾಲಿಬಾನ್ ಸರ್ಕಾರ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಇಲ್ಲಿಯವರೆಗೆ ಯಾವುದೇ ಸಂಘಟನೆಗಳು ಸ್ಫೋಟದ ಹೊಣೆಯನ್ನು ಹೊತ್ತಿಲ್ಲ ಎಂದು ತಿಳಿದುಬಂದಿದೆ.