ಒಣದ್ರಾಕ್ಷಿ ಬಹು ಉಪಯೋಗಿ ಡ್ರೈಫ್ರೂಟ್‌ಗಳಲ್ಲೊಂದು. ರುಚಿಯನ್ನು ಹೆಚ್ಚಿಸಲು ಇದನ್ನು ಪಾಯಸ, ಸಿಹಿತಿಂಡಿಗಳು ಮತ್ತು ಇತರ ಭಕ್ಷ್ಯಗಳಿಗೆ ಸೇರಿಸಲಾಗುತ್ತದೆ. ಒಣದ್ರಾಕ್ಷಿಗಳನ್ನು ನೆನೆಸಿ ಪ್ರತಿದಿನ ಬೆಳಿಗ್ಗೆ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿರುತ್ತದೆ. ಪೈಲ್ಸ್‌ನಿಂದ ಪರಿಹಾರ ನೀಡುತ್ತದೆ.
ಒಣದ್ರಾಕ್ಷಿಯನ್ನು ದಿನನಿತ್ಯ ಸೇವನೆ ಮಾಡುವುದರಿಂದ ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ ಮತ್ತು ಮೂಳೆಗಳು ಬಲಗೊಳ್ಳುತ್ತವೆ. ಕಪ್ಪು ಒಣದ್ರಾಕ್ಷಿಯಲ್ಲಿ ಕೂಡ ಇಂತಹ ಅನೇಕ ಉಪಯೋಗಗಳಿವೆ. ಹಲವು ಕಾಯಿಲೆಗಳಿಂದಲೂ ಇದು ನಮ್ಮನ್ನು ರಕ್ಷಿಸಬಲ್ಲದು.
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 7 ರಿಂದ 8 ಕಪ್ಪು ಒಣದ್ರಾಕ್ಷಿಗಳನ್ನು ಸೇವಿಸಿದರೆ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಮಲಬದ್ಧತೆಯ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ದೀರ್ಘಕಾಲದಿಂದ ಮಲಬದ್ಧತೆಯ ಸಮಸ್ಯೆ ಎದುರಿಸುತ್ತಿದ್ದರೆ ನಂತರ ಇದು ಪೈಲ್ಸ್ ತಂದೊಡ್ಡಬಹುದು. ಕಪ್ಪು ಒಣದ್ರಾಕ್ಷಿಯಲ್ಲಿರುವ ಫೈಬರ್ ನಿಮ್ಮ ಹೊಟ್ಟೆಗೆ ಪ್ರಯೋಜನಕಾರಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಕೆಟ್ಟ ಆಹಾರ ಪದ್ಧತಿಯಿಂದಾಗಿ ಜನರ ದೇಹದಲ್ಲಿ ಕಬ್ಬಿಣದ ಕೊರತೆ ಕಂಡುಬರುತ್ತದೆ. ಕಪ್ಪು ಒಣದ್ರಾಕ್ಷಿ ತಿನ್ನುವುದರಿಂದ ಈ ಕೊರತೆ ನೀಗುತ್ತದೆ. ದೇಹದಲ್ಲಿ ರಕ್ತವನ್ನು ಉತ್ಪಾದಿಸುತ್ತದೆ. ಮೂಳೆಗಳಿಗೂ ಇದು ಪ್ರಯೋಜನಕಾರಿ. ಆಸ್ಟಿಯೊಪೊರೋಸಿಸ್‌ನಿಂದ ಬಳಲುತ್ತಿರುವವರೂ ಇದನ್ನು ಸೇವಿಸಬಹುದು. ಚಳಿಗಾಲದಲ್ಲಿ ನಮ್ಮ ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ.
ಇದರಿಂದಾಗಿ ಹಲವು ರೀತಿಯ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಅಪಾಯವಿರುತ್ತದೆ. ಕಪ್ಪು ಒಣದ್ರಾಕ್ಷಿಗಳನ್ನು ಸೇವಿಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಅಧಿಕ ರಕ್ತದೊತ್ತಡವನ್ನು ಸಹ ಇದು ಕಡಿಮೆ ಮಾಡುತ್ತದೆ. ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡುತ್ತದೆ. ಹಾಗಾಗಿ ನಿಯಮಿತವಾಗಿ ಕಪ್ಪು ಒಣದ್ರಾಕ್ಷಿಯನ್ನು ಸೇವನೆ ಮಾಡಬಹುದು.