ಅಹಮದಾಬಾದ್: ಗುಜರಾತ್ ನಲ್ಲಿ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ಅನೇಕರಲ್ಲಿ ಬ್ಲಾಕ್ ಫಂಗಸ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಇಂತಹ ರೋಗಿಗಳಿಗೆಲ್ಲಿ ಪ್ರತ್ಯೇಕವಾದ ನಿರ್ಮಾಣ ಮಾಡಲಾಗಿದೆ.
ಗುಜರಾತ್ ಸರ್ಕಾರ ಕೊರೋನಾ ಆಸ್ಪತ್ರೆಗಳಲ್ಲಿ ಬ್ಲಾಕ್ ಫಂಗಸ್ ಸೋಂಕಿತರಿಗೆ ಪ್ರತ್ಯೇಕವಾದ ವಾರ್ಡ್ ನಿರ್ಮಾಣಕ್ಕೆ ಕ್ರಮ ಕೈಗೊಂಡಿದೆ. 3.12 ಕೋಟಿ ರೂಪಾಯಿ ಮೊತ್ತದಲ್ಲಿ 5000 ವಯಲ್ಸ್ ಔಷಧಗಳನ್ನು ಮೀಸಲಿಡಲಾಗಿದೆ.
ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ 60 ಹಾಸಿಗೆಗಳ ಎರಡು ವಾರ್ಡ್ ಗಳನ್ನು ಬ್ಲಾಕ್ ಫಂಗಸ್ ರೋಗಿಗಳಿಗೆ ಮೀಸಲಿಡಲಾಗಿದೆ. ಗುಜರಾತ್ ನಲ್ಲಿ 100 ಬ್ಲಾಕ್ ಫಂಗಸ್ ಸೋಂಕಿತರು ಪತ್ತೆಯಾಗಿದ್ದು, ಕೆಲವರು ಕಣ್ಣು ಕಳೆದುಕೊಂಡಿದ್ದಾರೆ.