ಮಳೆಗಾಲ ಬಂದರೆ ಸಾಕು, ಎಲ್ಲೆಲ್ಲೂ ತಂಪಾದ ವಾತಾವರಣ. ಮನೆಯಲ್ಲಿ ಬೆಚ್ಚನೆ ಇರೋದ್ರಲ್ಲೂ ಒಂದು ಖುಷಿ. ಅದೇ ರೀತಿ ಹಾವುಗಳು ಬೆಚ್ಚನೆಯ ಜಾಗವನ್ನ ಅರಸಿಕೊಂಡು ಹುತ್ತದಿಂದ ಬುಸ್ಗುಡ್ತಾ ಹೊರಗೆ ಬರುತ್ತೆ. ಎಲ್ಲಾದ್ರೂ ಬೆಚ್ಚನೆಯ ಜಾಗ ಸಿಕ್ಕಿದ್ರೆ ಸಾಕು, ಅಲ್ಲೇ ಸೆಟಲ್ ಆಗಿ ಬಿಡುತ್ತೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅಂತಹ ವಿಡಿಯೋಗಳು ಹೆಚ್ಚು ವೈರಲ್ ಆಗ್ತಿವೆ.
ಬಿಹಾರದ ಸರನ್ ಜಿಲ್ಲೆಯಲ್ಲೂ ಇಂತಹದ್ದೇ ಒಂದು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪೊಲೀಸ್ ಠಾಣೆಗೆ ಎಂಟ್ರಿಯಾಗಿರೋ ನಾಗರಹಾವು ಅಲ್ಲೇ ಹ್ಯಾಂಗರ್‌ನಲ್ಲಿ ನೇತು ಹಾಕಿದ್ದ ಪೊಲೀಸ್ ಯೂನಿಫಾರ್ಮ್ ಒಳಗೆ ಹೋಗಿ ಬೆಚ್ಚನೆ ಕೂತಿದೆ. ಅದು ಮಹಿಳಾ ಪೊಲೀಸ್ ಅಧಿಕಾರಿಯ ಶರ್ಟ್ ಆಗಿತ್ತು. ಎಂದಿನಂತೆ ಅವರು ತಮ್ಮ ಶರ್ಟ್ ಧರಿಸಲು ಹೋದಾಗ ಆ ಹಾವು ಒಮ್ಮಿಂದೊಮ್ಮೆಲೆ ಹೆಡೆ ಎತ್ತಿಕೊಂಡು ಬುಸ್ಗುಟ್ಟಿದೆ.
ಅಲ್ಲಿದ್ದ ಪೊಲೀಸರು ಹಾವಿನ ಉಗ್ರಾವತಾರ ನೋಡಿ ಹೌಹಾರಿದ್ದಾರೆ. ಕೊನೆಗೆ ಹಾವು ಹಿಡಿಯುವರನ್ನ ಕರೆಸಿ, ಆ ಹಾವನ್ನ ಸುರಕ್ಷಿತವಾಗಿ ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ. ಹಾವನ್ನ ಭದ್ರವಾಗಿ ತೆಗೆದುಕೊಂಡು ಹೋಗಿ ಈಗ ಸುರಕ್ಷಿತವಾದ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.
ಮಳೆಗಾಲದಲ್ಲಿ ಇಲ್ಲಿನ ಪಹ್ಲೇಜಾ ಘಾಟ್‌ನಿಂದ ಸೋನ್ಪುರ ರಸ್ತೆ ಮಾರ್ಗದವರೆಗಿನ ರೈಲು ಮಾರ್ಗ ಹಾಗೂ ರಸ್ತೆಬದಿಯಲ್ಲಿರುವ ಪೊದೆಗಳಲ್ಲಿ ವಿಷಪೂರಿತ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ. ಅಂತಹ ಹಾವುಗಳಲ್ಲಿ ಒಂದಾದ ಹಾವು ಈ ಪೊಲೀಸ್‌ಠಾಣೆಗೆ ಬಂದು ಪೊಲೀಸ್ ಯೂನಿಫಾರ್ಮ್ ಒಳಗೆ ಬೆಚ್ಚನೆ ಕೂತಿದೆ. ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.