ಚಿತ್ರದುರ್ಗ: ಸಾಹಿತಿ ಬಿ.ಎಲ್. ವೇಣು ಅವರಿಗೆ ‘ಸಹಿಷ್ಣು ಹಿಂದೂ’ ಹೆಸರಿನಲ್ಲಿ ಪತ್ರ ಬರೆಯಲಾಗಿದೆ. ಚಿತ್ರದುರ್ಗ ಕೆಳಗೋಟೆ ಬಡಾವಣೆಯಲ್ಲಿರುವ ಅವರ ನಿವಾಸಕ್ಕೆ ಎರಡು ಪುಟಗಳ ಕೈಬರಹದ ಪತ್ರ ಬರೆದು ಎಚ್ಚರಿಕೆ ನೀಡಲಾಗಿದೆ.
61 ಜನ ದುಷ್ಟಕೂಟದ ಸಾಹಿತಿಗಳಿಗೆ ತಿಳಿ ಹೇಳಿ ಎಂದು ಸಲಹೆ ನೀಡಲಾಗಿದೆ. ನೀವು ಎಸ್ಡಿಪಿಐ, ಪಿಎಫ್ಐ ಹಾಗೂ ಸಿಎಫ್ಐ ಜೊತೆ ಸೇರಿ ಕೊಂಡಿದ್ದೀರಿ. ದೇಶದ್ರೋಹಿಗಳ ಗುಂಪನ್ನು ಬೆಂಬಲಿಸುತ್ತಿದ್ದೀರಿ ಎಂದು ಎಚ್ಚರಿಕೆ ನೀಡಲಾಗಿದೆ
ಸಿದ್ದರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ನೆರವಾಗುತ್ತಿದ್ದೀರಿ ಎಂದು ಉಲ್ಲೇಖಿಸಲಾಗಿದ್ದು, ಸಾವರ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಕ್ಷಮೆ ಕೇಳಬೇಕು. ಪಠ್ಯ ಪರಿಷ್ಕರಣೆ ಬಗ್ಗೆ ಸಾಹಿತಿ ಬಿ.ಎಲ್. ವೇಣು ಅವರ ಟೀಕೆಗೆ ಆಕ್ಷೇಪಿಸಲಾಗಿದ್ದು, ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತಬೇಡಿ ಎನ್ನುವ ಹೇಳಿಕೆಗೆ ಕಿಡಿಕಾರಲಾಗಿದೆ.