ಬೆಂಗಳೂರು : ಜ.22 ರಂದು ಅಹಿತಕರ ಘಟನೆಗಳು ನಡೆದರೆ ಬಿ.ಕೆ ಹರಿಪ್ರಸಾದ್ ಕಾರಣ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾತನಾಡಿದ ಮಾಜಿ ಸಿಎಂ ಸದಾನಂದಗೌಡ ‘ಜ.22 ರಂದು ಅಹಿತಕರ ಘಟನೆಗಳು ನಡೆದರೆ ಬಿ.ಕೆ ಹರಿಪ್ರಸಾದ್ ಕಾರಣ, ಹರಿಪ್ರಸಾದ್ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆ, ಈ ಸಂಬಂಧ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸುತ್ತೇವೆ . ಕೂಡಲೇ ಹರಿಪ್ರಸಾದ್ ಬಂಧನ ಆಗಬೇಕು, ಜವಾಬ್ದಾರಿ ಸ್ಥಾನದಲ್ಲಿರುವ ಹರಿಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಗುಜರಾತ್ ನ ಗೋಧ್ರಾ ದುರಂತ ರೀತಿ ಮತ್ತೊಮ್ಮೆ ಏನಾದ್ರೂ ಆಗಬಹುದು, ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ಕೊಡಬೇಕು. ರಾಮಮಂದಿರವನ್ನು ಧಾರ್ಮಿಕ ಗುರುಗಳು ಉದ್ಘಾಟನೆ ಮಾಡುತ್ತಿದ್ದರೆ ನಾವು ಆಹ್ವಾನ ಇಲ್ಲದೇ ಹೋಗುತ್ತಿದ್ದೇವು. ಆದರೆ ಇದು ರಾಜಕೀಯ ಕಾರ್ಯಕ್ರಮವಾಗಿದೆ ಎಂದು ಕಾಂಗ್ರೆಸ್ ಎಂಎಲ್ ಸಿ ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ನಾಯಕರು ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ.