ತಮಿಳುನಾಡಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಭರ್ಜರಿ ಗೆಲುವು ಸಾಧಿಸಿದೆ. ಪ್ರತಿಪಕ್ಷ ಎಐಎಡಿಎಂಕೆ ಭದ್ರಕೋಟೆಯಲ್ಲೂ ಸಹ ಡಿಎಂಕೆ ಗೆಲುವಿನ ನಗೆ ಬೀರಿರುವುದು ವಿಶೇಷ.
ಇದರ ಮಧ್ಯೆ ಮತ್ತೊಂದು ವಿಶೇಷ ಸಂಗತಿ ಎಂದರೆ ನಾನು ನಾಥುರಾಮ್ ಗೋಡ್ಸೆ ಅವರ ಅಪ್ಪಟ ಅಭಿಮಾನಿ ಎಂದು ಹೇಳಿಕೊಂಡಿದ್ದ ಉಮಾ ಆನಂದನ್ ಅವರು ಗ್ರೇಟರ್ ಚೆನ್ನೈ ಮಹಾನಗರಪಾಲಿಕೆಯ ಏಕೈಕ ಬಿಜೆಪಿ ಸದಸ್ಯೆಯಾಗಿ ಗೆಲುವು ಸಾಧಿಸಿದ್ದಾರೆ.
ಉಮಾ ಆನಂದನ್ ಅವರು ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿದ್ದು, ತಾನು ನಾಥುರಾಮ್ ಗೋಡ್ಸೆ ಅವರ ಸೈದ್ಧಾಂತಿಕ ಮೊಮ್ಮಗಳು ಎಂದೇ ಅವರು ಹೇಳಿಕೊಂಡಿದ್ದರು. 200 ಸದಸ್ಯ ಬಲದ ಗ್ರೇಟರ್ ಚೆನ್ನೈ ಮಹಾನಗರಪಾಲಿಕೆಯಲ್ಲಿ ಅವರು ಬಿಜೆಪಿಯ ಏಕೈಕ ಸದಸ್ಯೆಯಾಗಿದ್ದಾರೆ.