alex Certify BREAKING: ಮಧ್ಯರಾತ್ರಿ ಮರು ಎಣಿಕೆಯಲ್ಲಿ ಕೇವಲ 16 ಮತಗಳಿಂದ ಸೌಮ್ಯಾರೆಡ್ಡಿ ವಿರುದ್ಧ ಗೆದ್ದ ಬಿಜೆಪಿ ಅಭ್ಯರ್ಥಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಮಧ್ಯರಾತ್ರಿ ಮರು ಎಣಿಕೆಯಲ್ಲಿ ಕೇವಲ 16 ಮತಗಳಿಂದ ಸೌಮ್ಯಾರೆಡ್ಡಿ ವಿರುದ್ಧ ಗೆದ್ದ ಬಿಜೆಪಿ ಅಭ್ಯರ್ಥಿ

ಬೆಂಗಳೂರು: ಹೈಡ್ರಾಮಾದ ಬಳಿಕ ಕೊನೆಗೂ ಜಯನಗರ ಕ್ಷೇತ್ರದ ಫಲಿತಾಂಶ ಪ್ರಕಟಿಸಲಾಗಿದೆ. 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಗೆಲುವು ಸಾಧಿಸಿದ್ದಾರೆ.

ಫಲಿತಾಂಶ ಗೊಂದಲದ ಗೂಡಾಗಿ ಮಧ್ಯರಾತ್ರಿ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಅವರು ಕಾಂಗ್ರೆಸ್ ಪಕ್ಷದ ಸೌಮ್ಯಾ ರೆಡ್ಡಿ ವಿರುದ್ಧ 16 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಮತ ಎಣಿಕೆಯ ಅಂತಿಮ ಸುತ್ತಿನಲ್ಲಿ ಸೌಮ್ಯಾ ರೆಡ್ಡಿ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಅವರಿಗಿಂತ ಇವಿಎಂ ಯಂತ್ರದಲ್ಲಿ 294 ಮತಗಳ ಅಂತರದಿಂದ ಮುನ್ನಡೆ ಪಡೆದುಕೊಂಡರು. ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು. ಅಂಚೆ ಮತಗಳ ಎಣಿಕೆಯಲ್ಲಿ ಸೌಮ್ಯ ರೆಡ್ಡಿ 160 ಮತಗಳ ಮುನ್ನಡೆ ಪಡೆದುಕೊಂಡಿದ್ದರು.

ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಮರು ಮತ ಎಣಿಕೆ ಮಾಡುವಂತೆ ಪಟ್ಟು ಹಿಡಿದಾಗ ಚುನಾವಣಾ ಅಧಿಕಾರಿಗಳು ಕೋರಿಕೆ ನಿರಾಕರಿಸಿದರು. ಮಧ್ಯಪ್ರವೇಶಿಸಿದ ಸಂಸದ ತೇಜಸ್ವಿ ಸೂರ್ಯ ಮರು ಮತ ಎಣಿಕೆಗೆ ಮನವಿ ಮಾಡಿದ್ದರಿಂದ ಪುನಃ ಮತ ಎಣಿಕೆ ಆರಂಭಿಸಲಾಯಿತು. ಮಾಹಿತಿ ತಿಳಿದ ಸೌಮ್ಯಾ ರೆಡ್ಡಿ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದರು. ಬೆಂಬಲಿಗರು, ಕಾರ್ಯಕರ್ತರು ಕೂಡ ಮತ ಎಣಿಕೆ ಕೇಂದ್ರದ ಮುಂದೆ ಜಮಾಯಿಸಿದರು.

ಮರು ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಅವರು ಸೌಮ್ಯಾ ರೆಡ್ಡಿ ಅವರಿಗಿಂತ 16 ಮತಗಳ ಮುನ್ನಡೆ ಸಾಧಿಸಿದರು. ಇದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿ 4 ಸಲ ಮರು ಮತ ಎಣಿಕೆ ನಡೆಸಲಾಯಿತು. ಬಿಜೆಪಿ ಅಭ್ಯರ್ಥಿ 16 ಮತಗಳಿಂದ ಜಯಗಳಿಸಿದ್ದಾರೆ ಎಂದು ಹೇಳಲಾಗಿದೆ.

ಮರುಮತ ಎಣಿಕೆ ಗೊಂದಲ ಉಂಟಾಗಿದ್ದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ. ಸುರೇಶ್ ಎಣಿಕೆ ಕೇಂದ್ರಕ್ಕೆ ಆಗಮಿಸಿದರು. ಡಿ.ಕೆ. ಸುರೇಶ್ ಅವರನ್ನು ಒಳ ಬಿಡಲು ಪೊಲೀಸರು ನಿರಾಕರಿಸಿದ್ದರಿಂದ ವಾಗ್ವಾದ ಮಾತಿನ ಚಕಮತಿ ನಡೆದಿದೆ. ಪ್ರತಿಭಟನೆ ನಡೆಸಲಾಗಿದೆ.

16 ಮತಗಳಿಂದ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದಾರೆ. ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಪ್ರಕಟಿಸಲಾಗಿದೆ. ಜಯನಗರ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು, ಮೊದಲ ಬಾರಿ ಮತ ಎಣಿಕೆಯಲ್ಲಿ ನನಗೆ ಗೆಲುವಾಗಿತ್ತು. ತೇಜಸ್ವಿ ಸೂರ್ಯ, ಅಶೋಕ್ ಅಕ್ರಮವಾಗಿ ಮತ ಎಣಿಕೆ ಕೊಠಡಿಗೆ ಪ್ರವೇಶಿಸಿದ್ದಾರೆ. ಅಕ್ರಮವಾಗಿ ಬಂದು ಬಿಜೆಪಿ ಅಭ್ಯರ್ಥಿ ಗೆಲ್ಲುವಂತೆ ಮಾಡಿದ್ದಾರೆ ಎಂದು ತಿಳಿಸಿದ್ದು, ಕೇಂದ್ರ ಚುನಾವಣಾ ಆಯೋಗಕ್ಕೆ ಇಂದು ದೂರು ನೀಡಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...