ನವದೆಹಲಿ: ಸೆಪ್ಟಂಬರ್ 18 ರಿಂದ 22 ರವರೆಗೆ ಸಂಸತ್ ವಿಶೇಷ ಅಧಿವೇಶನ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಂಸದರಿಗೆ ವಿಪ್ ಜಾರಿ ಮಾಡಲಾಗಿದೆ.
ಪಕ್ಷದ ಸಚೇತಕರು ಲೋಕಸಭೆಯ ಎಲ್ಲಾ ಸದಸ್ಯರಿಗೆ ಮೂರು ಸಾಲಿನ ವಿಪ್ ಜಾರಿ ಮಾಡಿದ್ದು, ಐದು ದಿನದ ವಿಶೇಷ ಅಧಿವೇಶನದ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿದ್ದಾರೆ. ಸಂಸತ್ ಕಲಾಪದಲ್ಲಿ ಪ್ರಮುಖ ವಿಧೇಯಕಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಸಂಸದರಿಗೆ ತಾಕೀತು ಮಾಡಿದ್ದು, ಕಲಾಪದಲ್ಲಿ ಸರ್ಕಾರ ಸಮರ್ಥನೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.
ಪ್ರಮುಖ ವಿಧೇಯಕಗಳ ಮಂಡನೆ ವೇಳೆ ಸರ್ಕಾರದ ಪರವಾಗಿ ಮತದಾನ ಮಾಡುವಂತೆ ಸಂಸದರಿಗೆ ತಿಳಿಸಲಾಗಿದೆ. ದೇಶ ಸ್ವಾತಂತ್ರ್ಯಗೊಂಡು 75 ವರ್ಷಗಳನ್ನು ಪೂರ್ಣಗೊಳಿಸಿದ ಹಾದಿ, ಸಂಸತ್ ನಡೆದು ಬಂದ ಹಾದಿ, 75 ವರ್ಷದ ಸಾಧನೆಗಳು, ನೆನಪುಗಳು, ಕಲಿಕೆ ಬಗ್ಗೆ ವಿಶೇಷ ಅಧಿವೇಶನದ ಮೊದಲ ದಿನ ಚರ್ಚೆ ನಡೆಯಲಿದೆ.
ಅಂಚೆ ಕಚೇರಿ ವಿಧೇಯಕ, ಮುಖ್ಯ ಚುನಾವಣಾ ಆಯುಕ್ತರ ನೇಮಕ ಕುರಿತ ವಿಧೇಯಕ ಸೇರಿ ಹಲವು ವಿಧೇಯಕಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗುವುದು.