ಬೆಂಗಳೂರು: ಸಿಎಂ ಖುರ್ಚಿ ಖಾಲಿಯಿಲ್ಲವೆಂದು ಹೇಳುತ್ತಲೇ ಸಿಎಂ ಸಿದ್ದರಾಮಯ್ಯನವರನ್ನು ಬದಿಗೆ ಸರಿಸುವ ಕಾರ್ಯ ಕಾಂಗ್ರೆಸ್‌ನಲ್ಲಿ ಚುರುಕುಗೊಂಡಿದೆ ಎಂದು ರಾಜ್ಯ ಬಿಜೆಪಿ ಟಾಂಗ್ ನೀಡಿದೆ.
ಸಿಎಂ ಹುದ್ದೆಗೆ ಟವಲ್ ಹಾಕಿರುವ ಎಂ.ಬಿ.ಪಾಟೀಲ್ ದೆಹಲಿಗೆ ತೆರಳಲು ಸಜ್ಜಾಗಿದ್ದರೆ ಮತ್ತೊಂದು ಕಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿದೇಶ ಪ್ರವಾಸಲ್ಲಿರುವ ರಾಹುಲ್ ಗಾಂಧಿ ಅವರನ್ನು ಅಲ್ಲಿಯೇ ಭೇಟಿ ಮಾಡಿ, ಶತೃ ಸಂಹಾರ ಯಾಗಕ್ಕೆ ಮುಹೂರ್ತ ಫಿಕ್ಸ್ ಮಾಡಿದರೂ ಆಶ್ಚರ್ಯಪಡಬೇಕಿಲ್ಲ ಎಂದು ವ್ಯಂಗ್ಯವಾಡಿದೆ.
ಕಾಂಗ್ರೆಸ್‌ನಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಫೆವಿಕಾಲ್ ಹಾಕಿಕೊಂಡು ಕುಳಿತಿರೂ ಸಿದ್ದರಾಮಯ್ಯನವರಿಗೆ ಖುರ್ಚಿ ಉಳಿಸಿಕೊಳ್ಳಲು ಆಗುತ್ತಿಲ್ಲ. ಮುಡಾ ಹಗರಣದಲ್ಲಿ ಸಿಲುಕಿ ಪ್ರತಿಪಕ್ಷಗಳು ರಾಜೀನಾಮೆ ಕೇಳಿದಾಗ ಭಂಡತನ ಪ್ರದರ್ಶಿಸುತ್ತಲೇ ಬಂದ ಮುಖ್ಯಮಂತ್ರಿಗಳು, ಬಲತ್ಕಾರದಿಂದ ಪದತ್ಯಾಗ ಮಾಡುವ ಸಮಯ ಸಮೀಪಿಸುತ್ತಿರುವಂತಿದೆ ಎಂದು ಬಿಜೆಪಿ ತಿಳಿಸಿದೆ.