ಬೆಂಗಳೂರು: ರಾಜ್ಯದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತಿಗೆ ನೀಡಿದ್ದ ಅನುದಾನದಲ್ಲಿ ಬಳಕೆ ಆಗದೇ ಉಳಿದ ₹1,494 ಕೋಟಿಯನ್ನು ಸಿದ್ದರಾಮಯ್ಯ ಸರ್ಕಾರ ಯಾರಿಗೂ ಕಾಣದಂತೆ ನುಂಗಿ ಹಾಕಿದೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.
ಬೆಳಗಾವಿ ಅಧಿವೇಶನದಲ್ಲಿ ಸ್ವತಃ ಸಿದ್ದರಾಮಯ್ಯ ಅವರೇ ಬಳಕೆ ಆಗದ ಅನುದಾನದ ಲೆಕ್ಕ ನೀಡಿದ್ದರು. ಆದರೆ, ಆ ಅನುದಾನ ರಾಜ್ಯದ ಬೊಕ್ಕಸ ಸೇರದೆ ಖದೀಮರ ಜೇಬು ಸೇರಿದೆ.
ಸಾವಿರಾರು ಕೋಟಿ ಅನುದಾನ ಎಲ್ಲಿಗೆ ಹೋಯಿತು, ಯಾರ ಜೇಬು ಸೇರಿತು ಎನ್ನುವ ಲೆಕ್ಕವೇ ಆರ್ಥಿಕ ಇಲಾಖೆಯಲ್ಲಿ ಇಲ್ಲ. ಲೂಟಿ ಮಾಡಲೆಂದೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಆ ಹಣವನ್ನು ನುಂಗಿ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.