ಬೆಂಗಳೂರು: ರಾಜ್ಯದ 1.82 ಲಕ್ಷ ಗೃಹಲಕ್ಷ್ಮಿಯರಿಗೆ ಎಲ್ಲಾ ದಾಖಲೆಗಳಿದ್ದರೂ ಭ್ರಷ್ಟ ಕಾಂಗ್ರೆಸ್ ಇದುವರೆಗೂ ಒಂದೇ ಒಂದು ಕಂತಿನ ಹಣವನ್ನು ಖಾತೆಗೆ ಜಮೆ ಮಾಡಿಲ್ಲ. ಆದರೂ ದಲಿತರ ಅಭಿವೃದ್ಧಿಗೆಂದು ಮೀಸಲಿಟ್ಟಿದ್ದ ಸುಮಾರು 26 ಸಾವಿರ ಕೋಟಿ ರೂ. ಯಾರ ಖಾತೆಗೆ ಹೋಗಿದೆ ಎಂಬ ಲೆಕ್ಕವೂ ಇಲ್ಲ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.
ಲೋಕಸಭಾ ಚುನಾವಣೆ ಮುಗಿದ ಬಳಿಕ ಗ್ಯಾರಂಟಿಗಳಿಗೆ ತಿಲಾಂಜಲಿ ಇಟ್ಟಿರುವ ಭ್ರಷ್ಟ A1 ಆರೋಪಿ ಸಿದ್ದರಾಮಯ್ಯ ಅವರು ದಲಿತರ ಭೂಮಿ ಕಬಳಿಸಿ ಖಜಾನೆ ಲೂಟಿ ಮಾಡಿ ಬೆಲೆ ಏರಿಕೆ ಮಾಡಿದ್ದು ಬಿಟ್ಟರೇ ಮತ್ತೊಂದು ಸಾಧನೆ ಇಲ್ಲ ಎಂದು ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ನಂಬಿದ್ರೆ ಟೋಪಿ ಗ್ಯಾರಂಟಿ. ಗೃಹಲಕ್ಷ್ಮಿ ಹಣ ತಲುಪಿಲ್ಲ, ಅಕ್ಕಿ ಹಣ ಸಿಕ್ಕಿಲ್ಲ, ಯುವನಿಧಿ ಹಣ ಬಂದೇ ಇಲ್ಲ….. ಕಾಂಗ್ರೆಸ್ ಸರ್ಕಾರ ಅಂಗೈನಲ್ಲಿ ಆಕಾಶ ತೋರಿಸಿ ಪಂಗನಾಮ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.