
ಬೆಂಗಳೂರು: ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿರುವ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಹೊಸ ಉದ್ಯಮ, ಪರಪ್ಪನ ಅಗ್ರಹಾರ ರೆಸಾರ್ಟ್ಸ್ & ಹೋಮ್ ಸ್ಟೇ!!! ಸುಂದರವಾದ ಪ್ರಕೃತಿಯ ಮಡಿಲಲ್ಲಿ ಅಪರಾಧಿಗಳೊಂದಿಗೆ ಗುಡು-ತುಂಡು-ಸಿಗರೇಟ್ ಜೊತೆ ಆರಾಮದಾಯಕ ಸಂಜೆಯನ್ನು ಕಳೆಯಿರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಕಿಡಿಕಾರಿದೆ.
ಉತ್ತಮವಾದ ವಸತಿ ವ್ಯವಸ್ಥೆ, ಟಿವಿ, ಶವರ್, ಆಪ್ತರ ಜೊತೆ ವಿಡಿಯೋ ಕಾಲ್ ಸೇರಿದಂತೆ ಇತರ ಎಲ್ಲಾ ವ್ಯವಸ್ಥೆಗಳನ್ನು ನಿಮ್ಮ ಬ್ಯಾರಕ್ ಗಳಲ್ಲೇ ಒದಗಿಸಲಾಗುವುದು ಎಂದು ವ್ಯಂಗ್ಯವಾಡಿದೆ.