ಮುಂದಿನ ವರ್ಷ ರಾಜ್ಯ ವಿಧಾನ ಸಭೆಗೆ ನಡೆಯಲಿರುವ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯದ ಮುಖ್ಯಮಂತ್ರಿಯ ಬದಲಾವಣೆಗೆ ಬಿಜೆಪಿ ನೋಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸ್ಥಾನದಲ್ಲಿ ಬಸವರಾಜ ಬೊಮ್ಮಾಯಿರ ಪ್ರದರ್ಶನದ ವಿಚಾರವಾಗಿ ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ಸಮಾಧಾನವಿಲ್ಲ ಎನ್ನಲಾಗಿದ್ದು, ಸದ್ಯ ಪಂಚ ರಾಜ್ಯಗಳ ಚುನಾವಣೆ ಇರುವ ಕಾರಣ ಈ ಸಂಬಂಧ ನಿರ್ಣಯವನ್ನು ಫಲಿತಾಂಶಗಳು ಬಂದ ಬಳಿಕ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೊಮ್ಮಾಯಿರ ಸ್ವಂತ ಜಿಲ್ಲೆಯಾದ ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲು ಕಂಡಿರುವುದು ಬಿಜೆಪಿಯ ನಾಯಕತ್ವಕ್ಕೆ ಅಸಹನೆ ತಂದಿದೆ ಎನ್ನಲಾಗಿದೆ. ಈ ಕಾರಣದಿಂದಾಗಿ 2023ರ ವಿಧಾನ ಸಭಾ ಚುನಾವಣೆ ಬಗ್ಗೆ ಬಿಜೆಪಿಯ ಅಗ್ರ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಮುಂದಿನ ಮುಖ್ಯಮಂತ್ರಿಯಾಗಿ ಯುವ ಮುಖವೊಂದನ್ನು ಬಿಜೆಪಿ ಆರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜಕೀಯವಾಗಿ ಪ್ರಭಾವಿಯಾಗಿರುವ ಪಂಚಮಶಾಲಿ ಲಿಂಗಾಯುತ ಸಮುದಾಯದಿಂದ ಈ ಹೊಸ ಮುಖ ಆರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ದಲಿತ ಮುಖ್ಯಮಂತ್ರಿಯ ಕುರಿತೂ ಮಾತುಗಳು ಪಕ್ಷದ ವಲಯಗಳಲ್ಲಿ ತೇಲಾಡುತ್ತಿವೆ ಎನ್ನಲಾಗಿದೆ.
ಇದೇ ವೇಳೆ ರಾಜ್ಯ ಸರ್ಕಾರದ ಸಂಪುಟದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿದ್ದು, ಹಿರಿಯ ನಾಯಕರಾದ ಕೆ.ಎಸ್. ಈಶ್ವರಪ್ಪ, ಮುರುಗೇಶ್ ನಿರಾಣಿ, ಸಿಸಿ ಪಾಟೀಲ್ ಮತ್ತು ಪ್ರಭು ಚೌಹಾಣ್‌ರನ್ನು ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳಿಗೆ 40 ಶಾಸಕರ ಲಾಬಿ ತುರುಸಿನಿಂದ ಸಾಗಿದೆ ಎನ್ನಲಾಗಿದೆ.