
ಬೆಂಗಳೂರು: ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಂದ ಇಂದು ದೇವಾಲಯದಲ್ಲಿ ಆಣೆ ಪ್ರಮಾಣ ನಡೆಯಲಿದೆ. ಬೆಂಗಳೂರಿನ ಬ್ಯಾಟರಾಯನಪುರ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ರವಿ, ಮುನೇಂದ್ರ ಕುಮಾರ್, ತಮ್ಮೇಶಗೌಡ ಅವರು ಪ್ರಮಾಣ ಮಾಡಲಿದ್ದಾರೆ.
ಕೊಡಿಗೇಹಳ್ಳಿ ಗೇಟ್ ಸಮೀಪದ ಗುಂಡಾಂಜನೇಯ ದೇವಾಲಯದಲ್ಲಿ ಆಣೆ ಪ್ರಮಾಣ ಮಾಡಲಿದ್ದಾರೆ. ಪಕ್ಷದಿಂದ ಯಾರನ್ನೇ ಅಭ್ಯರ್ಥಿ ಮಾಡಿದರೂ ಗೆಲುವಿಗೆ ಕೆಲಸ ಮಾಡುವುದಾಗಿ ಮತದಾರರ ಸಮ್ಮುಖದಲ್ಲಿ ಟಿಕೆಟ್ ಆಕಾಂಕ್ಷಿಗಳು ಆಣೆ ಪ್ರಮಾಣ ಮಾಡಲಿದ್ದಾರೆ.