ಮನೆ ಕೆಲಸದ ಮಹಿಳೆ ಮೇಲೆ ದೌರ್ಜನ್ಯ ನಡೆಸಿ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಜಾರ್ಖಂಡ್ ಬಿಜೆಪಿ ನಾಯಕಿ ಸೀಮಾ ಪಾತ್ರಾ ಅವರನ್ನು ಅಮಾನತುಗೊಳಿಸಲಾಗಿದೆ
ಸೀಮಾ ಪಾತ್ರಾ ಬಿಜೆಪಿಯ ಮಹಿಳಾ ವಿಭಾಗದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ಅವರ ಪತಿ ಮಹೇಶ್ವರ್ ಪಾತ್ರಾ ಅವರು ನಿವೃತ್ತ ಭಾರತೀಯ ಆಡಳಿತ ಸೇವೆ(IAS) ಅಧಿಕಾರಿ. ಸೀಮಾ ಕೇಂದ್ರ ಸರ್ಕಾರದ ‘ಬೇಟಿ ಬಚಾವೋ, ಬೇಟಿ ಪಢಾವೋ’ ಅಭಿಯಾನದ ರಾಜ್ಯ ಸಂಚಾಲಕರೂ ಆಗಿದ್ದಾರೆ;
ದಲಿತ್ ವಾಯ್ಸ್ ಹಂಚಿಕೊಂಡ ಪೋಸ್ಟ್ ಪ್ರಕಾರ, ಮನೆಗೆಲಸದವರನ್ನು ಪತ್ರಾ ಮನೆಯಲ್ಲಿ ಇರಿಸಲಾಗಿತ್ತು. ಎಂಟು ವರ್ಷಗಳ ಕಾಲ ಚಿತ್ರಹಿಂಸೆ ನೀಡಲಾಯಿತು. ಬಿಸಿಯಾದ ‘ತವಾ’(ಪಾನ್) ಮತ್ತು ಲೋಹದ ರಾಡ್ ಗಳಿಂದ ಆಕೆಯನ್ನು ಥಳಿಸಲಾಯಿತು. ನೆಲದ ಮೇಲಿನ ಮೂತ್ರ ನೆಕ್ಕುವಂತೆ ಒತ್ತಾಯಿಸಲಾಯಿತು ಎಂದು ಟ್ವಿಟರ್ ಪುಟ ತಿಳಿಸಿದೆ.
ಪೋಸ್ಟ್ ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಮಹಿಳೆಯು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದು, ತನ್ನೊಂದಿಗೆ ಮಾತನಾಡುವ ಪುರುಷನಿಗೆ ಕೆಲವು ಮಾತುಗಳನ್ನು ಹೇಳಲು ಹತಾಶ ಪ್ರಯತ್ನವನ್ನು ಮಾಡುತ್ತಿದ್ದಾಳೆ.
ವರದಿಗಳ ಪ್ರಕಾರ ಆಕೆಯ ಹಲ್ಲುಗಳು ಮುರಿದುಹೋಗಿವೆ. ಆಕೆಯ ದೇಹದ ಮೇಲೆ ಬಿದ್ದ ಪೆಟ್ಟುಗಳು ಆಕೆಯ ಮೇಲೆ ನಿರಂತರ ದಾಳಿ ನಡೆದಿರುವುದನ್ನು ಸೂಚಿಸುತ್ತವೆ.
ಬಿಜೆಪಿ ನಾಯಕಿ ಸೀಮಾ ಅವರನ್ನು ಬಂಧಿಸಬೇಕೆಂದು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ನಂತರ ಜಾರ್ಖಂಡ್ ಬಿಜೆಪಿ ಘಟಕದ ಅಧ್ಯಕ್ಷ ದೀಪಕ್ ಪ್ರಕಾಶ್ ಅಮಾನತುಗೊಳಿಸಿದ್ದಾರೆ.