
ಬೆಂಗಳೂರು: ನಾನು ಯಾವುದೇ ಕಾರಣಕ್ಕೂ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನೇ ನಿಭಾಯಿಸಲಾಗದೇ ಬಿಡುಗಡೆಗೊಳಿಸಿ ಎಂದು ಹೇಳುತ್ತಿದ್ದೇನೆ. ಇನ್ನು ರಾಜ್ಯಾಧ್ಯಕ್ಷ ಸ್ಥಾನ ಹೇಗೆ ನಿಭಾಯಿಸಲಿ? ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸುನೀಲ್ ಕುಮಾರ್, ವೈಯಕ್ತಿಕ ಕಾರಣಗಳಿಂದ ಹಾಗೂ ಹುದ್ದೆ ನಿಭಾಯಿಸಲು ಸಮಯದ ಅಭಾವದ ಕಾರಣಕ್ಕೆ ನಾನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಕೊಡಲು ಮುಂದಾಗಿದ್ದೇನೆ. ಹೊರತುಪಡಿ ಬೇರೆ ಯಾವುದೇ ಕಾರಣಗಳಿಲ್ಲ. ಯಾರ ಮೇಲೂ ಯಾವುದೇ ಅಸಮಾಧಾನವೂ ಇಲ್ಲ ಎಂದು ತಿಳಿಸಿದರು.
ನಾನು ಯಾವುದೇ ಕರಣಕ್ಕೂ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ನಮ್ಮ ಪಕ್ಷದಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ಹೈಕಮಾಂಡ್ ನಿಂದ ಆಗುವಂತದ್ದು. ಪಕ್ಷದ ಹೈಕಮಾಂಡ್ ನಿರ್ಧಾರದಂತೆ ರಾಜ್ಯಾಧ್ಯಕ್ಷರ ಆಯ್ಕೆಯಾಗತ್ತೆ. ಅವರ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ . ಯಾವುದೇ ಬಣ ರಾಜಕೀಯದಲೂ ನಾನಿಲ್ಲ. ಯಾರಿಗೂ ಬೆಂಬಲವ ನೀಡುವ ಪ್ರಶ್ನೆಯೂ ಇಲ್ಲ ಎಂದರು.
ರಾಜ್ಯದಲ್ಲಿನ ಪ್ರತ್ಯೇಕ ಸಭೆಗಳು ಪಕ್ಷದ ಬೆಳವಣಿಗೆಯಿಂದ ಒಳ್ಳೆದಲ್ಲ. ಈ ಬಗ್ಗೆ ನಾನು ನನ್ನ ಅಭಿಪ್ರಾಯವನ್ನು ಯಾರಮುಂದೆ ತಿಳಿಸಬೇಕು ತಿಳಿಸಿದ್ದೇನೆ. ಈ ಬೆಳವಣಿಗೆಯಿಂದ ಕಾರ್ಯಕರ್ತರು ನೊಂದಿದ್ದಾರೆ. ರಾಜ್ಯ ನಾಯಕರು ಇಂತಹ ಬೆಳವಣಿಗೆಗಳಿಂದ ಹೊರಬರಬೇಕು ಎಂದರು.